ಬೆಂಗಳೂರಲ್ಲಿ ಮಾರ್ಚ್ 1 ರಿಂದ ಪೇ ಅಂಡ್ ಪಾರ್ಕ್ ನಿಯಮ ಜಾರಿ

ನಗರದಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಮಾರ್ಚ್ 1ರಿಂದ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ. ಮೊದಲಿಗೆ ಪ್ರಾಯೋಗಿಕವಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಮಾರ್ಚ್ 1ರಿಂದ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ. ಮೊದಲಿಗೆ ಪ್ರಾಯೋಗಿಕವಾಗಿ 56 ರಸ್ತೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿತ್ತು. 4 ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದು, ಮುಂದಿನವಾರದಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ.

ಟೆಂಡರ್ ಪಡೆಯುವ ಕಂಪನಿ 56 ರಸ್ತೆಗಳಲ್ಲಿ 2,500 ಕಾರು ಮತ್ತು 4000 ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿದೆ. ನಿಯಮ ಜಾರಿಗೆ ಬರಲಿರುವ ರಸ್ತೆಗಳಲ್ಲಿ ಸಿಸಿಟಿವಿ ಆಳವಡಿಸಲಾಗುತ್ತದೆ. ಎಲೆಕ್ಟ್ರಾನಿಕ್ ಬೋರ್ಡ್‌ಗಳಲ್ಲಿ ಪಾರ್ಕಿಂಗ್ ಲಭ್ಯತೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ನಗರ ಭೂಸಾರಿಗೆ ನಿರ್ದೇಶನಾಲಯ  ಈ ಹಿಂದೆಯೇ ಪೇ ಅಂಡ್ ಪಾರ್ಕ್ ನೀತಿಯನ್ನು ರೂಪಿಸಿತ್ತು. 2015ರಲ್ಲಿಯೇ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು. ಮಾರ್ಚ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಲ್ಲಾ ರಸ್ತೆಗಳಿಗೂ ಪ್ರತ್ಯೇಕ ಶುಲ್ಕ ಜಾರಿ ಮಾಡಲಾಗುತ್ತದೆ. ಎ ಶ್ರೇಣಿಯ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು 1 ಗಂಟೆ ನಿಲ್ಲಿಸಲು 15 ರೂ., ಕಾರನ್ನು ಒಂದು ಗಂಟೆ ನಿಲ್ಲಿಸಲು 30 ರೂ. ಪಾವತಿ ಮಾಡಬೇಕಾಗುತ್ತದೆ.

'ಎ' ಶ್ರೇಣಿಯ ರಸ್ತೆಗಳ ವ್ಯಾಪ್ತಿಗೆ ಅವೆನ್ಯೂ ರಸ್ತೆ, ಎಸ್‌.ಸಿ.ರಸ್ತೆ, ರೇಸ್ ಕೋರ್ಸ್ ಲೂಪ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಕಮರ್ಷಿಯಲ್ ಸ್ಟೀಟ್, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರಬಾ ರಸ್ತೆ, ಲಾಲ್ ಬಾಗ್ ರಸ್ತೆ, ಎನ್‌.ಆರ್.ರಸ್ತೆ ಸೇರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com