ಸಾಹಿತಿ ಡಾ.ಎಂ.ಅಕಬರ ಅಲಿ ವಿಧಿವಶ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಹಿತಿ, ಚುಟುಕು ಕವಿ ಡಾ.ಎಂ.ಅಕಬರ ಅಲಿ(92 ವ) ಭಾನುವಾರ ಬೆಳಗ್ಗೆ...
ಸಾಹಿತಿ ಡಾ.ಎಂ.ಅಕಬರ್ ಅಲಿಯವರ ಯೌವ್ವನದ ಭಾವಚಿತ್ರ
ಸಾಹಿತಿ ಡಾ.ಎಂ.ಅಕಬರ್ ಅಲಿಯವರ ಯೌವ್ವನದ ಭಾವಚಿತ್ರ

ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಹಿತಿ, ಚುಟುಕು ಕವಿ ಡಾ.ಎಂ.ಅಕಬರ ಅಲಿ(92 ವ) ಭಾನುವಾರ ಬೆಳಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ನವೋದಯ ಕಾಲದ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಕಬರ ಸರ್ವಜ್ಞನ ಕುರಿತು ಪಿ.ಎಚ್ ಡಿ ಮಾಡಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರೂ ಕೂಡ ಆಗಿದ್ದರು.

ಮುಂದಿನ ತಿಂಗಳು 3ರಂದು ಅವರ 93ನೇ ಜನ್ಮದಿನ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದೆವು.ಅದರ ಮಧ್ಯೆಯೇ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಡಾ.ಎಂ.ಜಿ.ಆರ್.ಅರಸ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಕೆಲ ವರ್ಷಗಳವರೆಗೆ ಕಾರವಾರ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮೈಸೂರು ವಿವಿಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com