
ಮಾನ್ವಿ: ಗಂಡನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ತುಂಬು ಗರ್ಭಿಣಿ ಈರಮ್ಮನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಾಗಭಾವಿ ಗ್ರಾಮದ ಈರಮ್ಮ ಇಂದು ಮಧ್ಯಾಹ್ನ ಪತಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪತಿ ಸುತ್ತಮುತ್ತಲಿದ್ದ ಹೆಂಗಸರಿಗೆ ತನ್ನ ಪತ್ನಿಗೆ ಹೆರಿಗೆ ನೋವು ಬಂದಿದೆ ಬಂದು ನೋಡಿ ಎಂದು ಕೇಳಿಕೊಂಡಿದ್ದಾರೆ.
ಕೂಡಲೇ ಅಲ್ಲಿಗೆ ಬಂದ ಹೆಂಗಸರು ಸುಖ ಪ್ರಸವ ಮಾಡಿಸಿದ್ದು, ಈರಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.
Advertisement