ಹಾರ್ಡ್ ಡ್ರೈವ್ ಬದಲು ಬಂತು ಗ್ರಾನೈಟ್!
ಬೇಲೂರು: ಆರ್ಡರ್ ಕೊಟ್ಟಿದ್ದು ಹಾರ್ಡ್ ಡ್ರೈವ್‍ಗಾಗಿ ಕಳುಹಿಸಿಕೊಟ್ಟಿದ್ದು 2 ಕೆ.ಜಿ. ತೂಕದ ಗ್ರಾನೈಟ್ ಕಲ್ಲು!
ಆನ್‍ಲೈನ್‍ನಲ್ಲಿ ಪೇಟಿಎಂ ಮೂಲಕ ಹಾರ್ಡ್ ಡ್ರೈವ್ ಬುಕ್ ಮಾಡಿದ ಬೇಲೂರಿನ ವ್ಯಕ್ತಿಯೊಬ್ಬರಿಗೆ ಆದ ವಂಚನೆ ಇದು. ಬೇಲೂರಿನ ದೇವಸ್ಥಾನ ರಸ್ತೆಯಲ್ಲಿರುವ ಮಧು ಮೆಡಿಕಲ್ಸ್ ಮಾಲೀಕ ಮಧುಸೂದನ್ ಅವರು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸದಲ್ಲಿರುವ ಮಗಳು ಪ್ರೇಕ್ಷಾ ಅವರಿಗಾಗಿ ಪೋರ್ಟೆಬಲ್ ಹಾರ್ಡ್ ಡ್ರೈವ್ ಬುಕ್ ಮಾಡಿದ್ದರು.ಇದಕ್ಕಾಗಿ 135 ರೂಪಾಯಿಯನ್ನು ಮುಂಬೈನ ಪೇಟಿಎಂ ಹೆಸರಿಗೆ ಡಿಡಿ ಮಾಡಿದ್ದಾರೆ.
ಗುರುವಾರ ಸಂಜೆ ತಮ್ಮ ಅಂಗಡಿಗೆ ಪೇಟಿಎಂನಿಂದ ಬಂದ ಪಾರ್ಸೆಲ್ ಅನ್ನು ಕೊರಿಯರ್ ಬಾಯ್ ಮುಂದೆಯೇ ಬಿಚ್ಚಿ ನೋಡಿದಾಗ ಅದರೊಳಗೆ ಚೌಕಾಕಾರದ ಹಾರ್ಡ್‍ಡ್ರೈವ್ ಹೋಲುವ 2 ಕೆ.ಜಿ ತೂಕದ ಕಪ್ಪು ಗ್ರಾನೈಟ್ ಕಲ್ಲು ಇರುವುದನ್ನು ನೋಡಿ ದಂಗಾಗಿದ್ದಾರೆ. ಮೋಸ ಹೋಗಿರುವ ಮಧು ಅವರು ಕಂಪನಿ ವಿರುದ್ಧ ನೇರವಾಗಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಚಿಂತನೆಯಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ಪೇಟಿಎಂ ಆನ್‍ಲೈನ್ ಬುಕಿಂಗ್ ಕಂಪನಿಯಿಂದ ಅಚಾತುರ್ಯವಾಗಿದೆ. ಗ್ರಾಹಕರಿಗೆ ಪಾರ್ಸಲ್ ತಲುಪದ ಕಾರಣ ಅವರಿಂದ ಹಿಂಬದಿಯ ಕೈಬರಹ ಹಾಗೂ ವಿವರಣೆ ಪಡೆದು ಈಗ ಬಂದಿರುವ ಪಾರ್ಸೆಲ್ ವಾಪಸ್ ಕಂಪನಿಗೆ ಕಳುಹಿಸಿ ಗ್ರಾಹಕರ ಹಣವನ್ನು ಹಿಂತಿರುಗಿಸುವ ಏರ್ಪಾಡು ಮಾಡಲಾಗುವುದು.
● ಶ್ರೀಧರ್ ಪೇಟಿಎಂ ಕಂಪನಿ ಹಾಸನ ವಿಭಾಗದ ಅಧಿಕಾರಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ