ಮೇಲ್ಮನೆಗೆ ಆಯ್ಕೆ: ಒಕ್ಕಲಿಗ-ಲಿಂಗಾಯಿತರೆ ಪ್ರಬಲರು

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಪೈಕಿಒಕ್ಕಲಿಗ(7), ಲಿಂಗಾಯಿತ (6) ಜನಾಂಗ...
ವಿಧಾನಪರಿಷತ್ತು ಕಲಾಪದ ಸಾಂದರ್ಭಿಕ ಚಿತ್ರ
ವಿಧಾನಪರಿಷತ್ತು ಕಲಾಪದ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾ ವಣೆಯಲ್ಲಿ ಆಯ್ಕೆಯಾದವರ ಪೈಕಿ ಒಕ್ಕಲಿಗ (7), ಲಿಂಗಾಯಿತ (6) ಜನಾಂಗದವರು  ಸಮಬಲ ಸಾಧಿಸಿದ್ದು, ಉಳಿದಂತೆ ಕುರುಬ-2, ಮರಾಠ- 2 ಜತೆಗೆ  ಬಂಟ, ಕೊಡವ, ಬಿಲ್ಲವ,  ದೇವಾಂಗ, ಬಲಿಜ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ರಜಪೂತ ಸಮುದಾಯದಿಂದ ತಲಾ ಒಬ್ಬೊಬ್ಬರು ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ.

ಇವರಲ್ಲಿ ಕಾಂಗ್ರೆಸ್‍ನಿಂದ ಲಿಂಗಾಯಿತ- ಎಸ್.ಆರ್. ಪಾಟೀಲ್ (ಬಾಗಲ ಕೋಟೆ),  ಸವರಾಜ ಪಾಟೀಲ್ ಇಟಗಿ (ರಾಯಚೂರು), ಒಕ್ಕಲಿಗ- ಎಂ.ಎ. ಗೋಪಾಲಸ್ವಾಮಿ  ಹಾಸನ), ಎಂ.ನಾರಾಯಣಸ್ವಾಮಿ (ಬೆಂಗಳೂರು ನಗರ ), ಎಸ್.ರವಿ (¨ಬೆಂಗಳೂರು   ಗ್ರಾಮಾಂತರ), ಮರಾಠ-ಘೋಟ್ನೇಕರ್ ಶ್ರೀಕಾಂತ್ (ಉತ್ತರ ಕನ್ನಡ), ಶ್ರೀನಿವಾಸ ಮಾನೆ (ಧಾರವಾಡ), ಕುರುಬ- ಆರ್.ಪ್ರಸನ್ನ ಕುಮಾರ್ (ಶಿವಮೊಗ್ಗ), ರಜಪೂತ- ವಿಜಯ್ ಸಿಂಗ್  ಬೀದರ್),  ವಿಶ್ವಕರ್ಮ- ಆರ್.ರಘು ಆಚಾರ್ (ಚಿತ್ರದುರ್ಗ), ಪರಿಶಿಷ್ಟ ಜಾತಿ- ಆರ್. ಧರ್ಮಸೇನ (ಮೈಸೂರು), ಬಂಟ- ಪ್ರತಾಪ್‍ಚಂದ್ರ ಶೆಟ್ಟಿ (ದಕ್ಷಿಣ ಕನ್ನಡ), ದೇವಾಂಗ- ಕೆ.ಸಿ.   ಕೊಂಡಯ್ಯ ಬಳ್ಳಾರಿ) ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಲಿಂಗಾಯಿತ- ಬಿ.ಜಿ. ಪಾಟೀಲ್ (ಕಲಬುರ್ಗಿ), ಕವಟಗಿಮಠ ಮಹಾಂತೇಶ   ಮಲ್ಲಿಕಾರ್ಜುನ (ಬೆಳಗಾವಿ), ಪ್ರದೀಪ್ ಶೆಟ್ಟರ್ (ಧಾರವಾಡ),  ಬಿಲ್ಲವ- ಕೋಟಾ ಶ್ರೀನಿವಾಸ  ಜಾರಿ (ದಕ್ಷಿಣ ಕನ್ನಡ), ಒಕ್ಕಲಿಗ- ಎಂ.ಕೆ. ಪ್ರಾಣೇಶ್ (ಚಿಕ್ಕಮಗಳೂರು), ಕೊಡವ-ಸುನೀಲ್  ಸುಬ್ರಮಣಿ (ಕೊಡಗು)  ಹಾಗೂ ಜೆಡಿಎಸ್‍ನಿಂದ ಒಕ್ಕಲಿಗ- ಅಪ್ಪಾಜಿಗೌಡ (ಮಂಡ್ಯ), ಸಂದೇಶ್ ನಾಗರಾಜ್ (ಮೈಸೂರು), ಕಾಂತರಾಜ್ (ತುಮಕೂರು), ಬಲಿಜ- ಸಿ.ಆರ್.  ಮನೋಹರ್  ಕೋಲಾರ), ಪಕ್ಷೇತರರಾಗಿ ಗೆದ್ದವರಲ್ಲಿ ಕುರುಬ- ವಿವೇಕರಾವ್ ವಸಂತರಾವ್ ಪಾಟೀಲ್  ಬೆಳಗಾವಿ), ಲಿಂಗಾಯಿತ- ಬಸವನಗೌಡ ಪಾಟೀಲ್ ಯತ್ನಾಳ್ (ಬಾಗಲಕೋಟೆ) ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದಾರೆ.

ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಕಾಂಗ್ರೆಸ್ ಪಕ್ಷ 20 ಅಭ್ಯರ್ಥಿಗಳ ಪೈಕಿ ಒಕ್ಕಲಿಗ-5,  ಲಿಂಗಾಯಿತ-5, ಕುರುಬ-2, ಮರಾಠ- 2, ವಿಶ್ವಕರ್ಮ- 1, ಬಂಟ- 1, ರಜಪೂತ- 1, ಪರಿಶಿಷ್ಟ  ಜಾತಿ-1, ಪರಿಶಿಷ್ಟ ಪಂಗಡ- 1, ಜೈನ- , ನೇಕಾರ- 1 ಇದ್ದರೆ, ಬಿಜೆಪಿಯ 20  ಅಭ್ಯರ್ಥಿಗಳ  ಪೈಕಿ ಒಕ್ಕಲಿಗ-5, ಲಿಂಗಾಯಿತ-9, ಕುರುಬ-2, ಮಡಿವಾಳ- 1, ಕೊಡವ- 1, ಬಿಲ್ಲವ- 1, ಮರಾಠ-1 ಇದ್ದರೆ, ಜೆಡಿಎಸ್ ಕಣಕ್ಕಿಳಿಸಿದ್ದ 17 ಅಭ್ಯರ್ಥಿಗಳ ಪೈಕಿ ಲಿಂಗಾ ಯಿತ-4,  ಒಕ್ಕಲಿಗ- 6, ಕುರುಬ-1, ಕೊಡವ-1, ಬಲಿಜ-1, ಜೈನ-1,  ರೆಡ್ಡಿ-1, ಕೊಂಕಣಿ-1  ಜನಾಂಗದವರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com