ಸಚಿವ ಆಗಿರುವುದರಿಂದ ಗೌರವ, ಇಲ್ಲಾಂದ್ರೆ ನಾನೂ ಅಸ್ಪೃಶ್ಯನೆ!

ಸಚಿವನಾಗಿರುವ ಕಾರಣ ನನ್ನನ್ನು ಕೆಲವು ಕಡೆ ಅಸ್ಪೃಶ್ಯನಂತೆ ನೋಡದೇ ಇರಬಹುದು. ಆದರೆ ನಮ್ಮ ಸಮುದಾಯದವರನ್ನು ಇಂದಿಗೂ ಅಸ್ಪೃಶ್ಯರಂತೆ ಕೀಳಾಗಿ ...,.
ಎಚ್. ಆಂಜನೇಯ
ಎಚ್. ಆಂಜನೇಯ

ಚಿತ್ರದುರ್ಗ: ಸಚಿವನಾಗಿರುವ ಕಾರಣ ನನ್ನನ್ನು ಕೆಲವು ಕಡೆ ಅಸ್ಪೃಶ್ಯನಂತೆ ನೋಡದೇ ಇರಬಹುದು. ಆದರೆ ನಮ್ಮ ಸಮುದಾಯದವರನ್ನು ಇಂದಿಗೂ ಅಸ್ಪೃಶ್ಯರಂತೆ ಕೀಳಾಗಿ ಕಾಣಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ನಗರದ ಹೊರ ವಲಯದಲ್ಲಿರುವ ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ನದಾಫ್ , ಪಿಂಜಾರ ಸಮಾಜದ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ ನನಗೆ ಧರ್ಮ ಯಾವುದೆಂದು ಗೊತ್ತಿಲ್ಲ. ನಾವು ವಿಶ್ವಮಾನವರು. ಎಲ್ಲ ಧರ್ಮದ ಜನ, ವರ್ಗದವರ ಸೇವೆ ಮಾಡುತ್ತೇವೆ. ಹಾಗಾಗಿ ನಮ್ಮನ್ನು ದಲಿತರೆಂದು ಕರೆಯುತ್ತಾರೆ ಎಂದು ಹೇಳಿದರು.

ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದರು. ಪೈಗಂಬರ್, ಏಸು ಕ್ರಿಸ್ತ ವಿಶ್ವ ಮಾನವತ್ವ ಪ್ರತಿಪಾದನೆ ಮಾಡಿದರು. ಹಿಂದೂ ಧರ್ಮ ಸೇರಿ ಎಲ್ಲ ಧರ್ಮದ ಸ್ತೀಯರಿಗೆ ಸ್ವಾತಂತ್ರ್ಯ ಸಿಗಬೇಕು. ಮಹಿಳೆ ಎಲ್ಲ ಕಡೆ ಭಾಗವಹಿಸಬೇಕೆನ್ನುವ ಉದ್ದೇಶದಿಂದ ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಮಹಿಳೆಯರಿಗೆ ಸಮಾನ ಅವಕಾಶನೀಡಿ ಪ್ರಪಂಚ ಮೆಚ್ಚುವಂತಹ ಬೃಹತ್ ಸಂವಿಧಾನ ಕೊಟ್ಟಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com