
ಬೆಂಗಳೂರು: ನಷ್ಟದ ಸುಳಿಯಲ್ಲಿ ಸಿಲುಕಿದ್ದ ಅಮಾನತ್ ಬ್ಯಾಂಕ್‍ನ್ನು ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನ್ಯಾ.ಅಬ್ದುಲ್ ನಜೀರ್ ಹಿಂದೆ ಸರಿದಿದ್ದಾರೆ.
ಸೋಮವಾರ ಬೆಳಗ್ಗೆ ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲಿ ಈ ಪ್ರಕರಣದ ವಿಚಾರಣೆಯಲ್ಲಿ ನನ್ನ ನಿಯತ್ತಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ನನಗೆ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಕೆಲವರು ಅನಾಮಧೇಯ ಪತ್ರ ಬರೆದಿದ್ದಾರೆ. ಇದರಿಂದ ನನಗೆ ನೋವಾಗಿದೆ. ವಿಚಾರಣೆ ಸೂಕ್ತವಾಗಿ ನಡೆಯುತ್ತಿತ್ತು. ಇದೇ ರೀತಿಯಲ್ಲಿ ಮುಂದುವರೆದಿದ್ದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್ ಸಶಕ್ತವಾಗಿ ಬೆಳೆಯುವುದಕ್ಕೆ ಅವಕಾಶವಿತ್ತು. ಆದರೆ, ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಆಗಬಾರದಿತ್ತು ಎಂದು ಬೇಸರದಿಂದ ಹೇಳಿದ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡುತ್ತಿರುವುದಾಗಿ ಹೇಳಿದರು.
ಹಿಂದೆ ಸರಿದ ಎರಡನೇ ನ್ಯಾಯಮೂರ್ತಿ: ಈ ಪ್ರಕರಣ ನಜೀರ್ ಅವರ ಪೀಠದ ಮುಂದೆ ವಿಚಾರಣೆಗೆ ಬರುವ ಮುನ್ನ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿತ್ತು. ಆಗಲೂ ವಿಚಾರಣೆಯು ನಿರ್ಣಾಯಕ ಹಂತ ತಲುಪಿದೆ ಎನ್ನುವಾಗ ನ್ಯಾಯಮೂರ್ತಿ ಅನಾಮಧೇಯ ಪತ್ರಗಳನ್ನು ಬಂದಿದ್ದವು ಇದರಿಂದ ರಾಮಮೋಹನ ರೆಡ್ಡಿ ಅವರು ಪ್ರಕರಣದ ವಿಚಾರಣೆ ಕೈಬಿಟ್ಟಿದ್ದರು.
Advertisement