ಖಾದಿ ಬಟ್ಟೆಗೆ ಫ್ಯಾಶನ್ ಟಚ್: ಲಕ್ಷ್ಮಣರಾವ್

ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಬಳಸುವುದು ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಲು ಸಾಂಪ್ರದಾಯಿಕ ಖಾದಿ ಬಟ್ಟೆಗಳಿಗೆ ಫ್ಯಾಷನ್ ಟಚ್ ನೀಡಿದ್ದೇವೆ...
ಫ್ರೀಡಂ ಪಾರ್ಕ್ ನಲ್ಲಿ ಖಾದಿ ಉತ್ಸವ
ಫ್ರೀಡಂ ಪಾರ್ಕ್ ನಲ್ಲಿ ಖಾದಿ ಉತ್ಸವ

ಖಾದಿಯೆಂದರೆ ಅದು ಬಿಳಿ ಬಣ್ಣದಲ್ಲಿರುತ್ತದೆ. ವಯಸ್ಸಾದವರು. ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಬಳಸುವುದು ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಲು ಸಾಂಪ್ರದಾಯಿಕ ಖಾದಿ ಬಟ್ಟೆಗಳಿಗೆ ಫ್ಯಾಷನ್ ಟಚ್ ನೀಡಿದ್ದೇವೆ' ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ  ಮಂಡಳಿ ಅಧ್ಯಕ್ಷ  ಲಕ್ಷ್ಮಣ ರಾವ್ ಚಿಂಗಳೆ ತಿಳಿಸಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಖಾದಿ ಉತ್ಸವದಲ್ಲಿ ಮಾಡನಾಡಿದ ಅವರು  ಖಾದಿಯನ್ನು ಕೇವಲ ಬಿಳಿ ಬಣ್ಣದಲ್ಲಿ ನೇಯ್ದರೆ ಒಪ್ಪುವುದಿಲ್ಲ. ಎಂದು ಬೇರೆ ಬೇರೆ ಬಣ್ಣಗಳಲ್ಲಿ ತಯಾರಿಸುತ್ತಿದ್ದೇವೆ ಅದಕ್ಕೆ ರಾಜ್ಯವ್ಯಾಪಿ ಫ್ಯಾಶನ್  ಡಿಸೈನರ್‍ಗಳ ಹುಡುಕಾಟದಲ್ಲಿದ್ದು ಸದ್ಯದಲ್ಲೇ ಖಾದಿ ಬಟ್ಚೆಗಳು ವಿಶೇಷ ರೀತಿಯಲ್ಲಿ ಹೊರಬರಲಿವೆ. ಈಗಾಗಲೇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ರು. 3 ಕೋಟಿ ನೀಡಿದ್ದೇವೆ ಎಂದರು.

ಖಾದಿ ಮಂಡಳಿ ನಷ್ಟದಲ್ಲಿ ಇಲ್ಲ, ಖಾದಿ ಯನ್ನು ಲಾಭ ನಷ್ಟದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಮಂಡಳಿಗೆ ನೇಕಾರರ ಅಭಿವೃದ್ಧಿ ಮುಖ್ಯ. ನೇಕಾರರಿಗೆ ಒಂದು ಅಡಿಗೆ 50ಪೈಸೆ ಇದ್ದದ್ದನ್ನು ರು. 3 ಕ್ಕೆ ಹೆಚ್ಚಿಸಲಾಗಿದೆ. ನೂಲುವವರಿಗೆ 90ಪೈಸೆಯಿಂದ ರು. 7 ಹೆಚ್ಚಳ ಮಾಡಲಾಗಿದೆ. ಸರ್ಕಾರ ಖಾದಿಯನ್ನು ಅಬಿವೃದ್ಧಿಗೊಳಿಸಲು ಈ ಬಾರಿ ಬಜೆಟ್‍ನಲ್ಲಿ ರು, 80 ಕೋಟಿ ಮೀಸಲಿಟ್ಟಿದೆ ಹಾಗೂ ಮೂಲ ಸೌಕರ್ಯವನ್ನು ಒದಗಿಸುತ್ತಿದೆ ಎಂದರು. ಖಾದಿ ಉತ್ಸವದಲ್ಲಿ ಒಟ್ಟು 250 ಮಳಿಗೆಗಳಿದ್ದವು. ದೋತಿ, ಕುರ್ತಾ, ಕೋಟ್ ಗಳು, ಷರ್ಟ್‍ಗಳು, ಸೀರೆಗಳು, ಉತ್ಕೃಷ್ಟ ಗುಣಮಟ್ಟದ ತಿಂಡಿ ತಿನಿಸುಗಳು ಲಭ್ಯವಿವೆ. ಉತ್ಸವ ಫೆ . 5ರವರೆಗೆ ನಡೆಯಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com