ಸಂಸದೀಯ ಕಾರ್ಯದರ್ಶಿಗಳ ನೇಮಕ: ಅರ್ಜಿ ಹಿಂದಕ್ಕೆ

ರಾಜ್ಯ ಸರ್ಕಾರ ವಿಧಾನ ಸಭೆಯ 10 ಹಾಗೂ ವಿಧಾನ ಪರಿಷತ್‍ನ ಒಬ್ಬ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ ...
ಪದ್ಮನಾಭ ಪ್ರಸನ್ನ
ಪದ್ಮನಾಭ ಪ್ರಸನ್ನ

ಬೆಂಗಳೂರು: ರಾಜ್ಯ ಸರ್ಕಾರ ವಿಧಾನ ಸಭೆಯ 10 ಹಾಗೂ ವಿಧಾನ ಪರಿಷತ್‍ನ ಒಬ್ಬ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಜನತಾ ಪಕ್ಷದ ಮುಖಂಡ ಪದ್ಮನಾಭ ಪ್ರಸನ್ನಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ಅರ್ಜಿಯ ನಡೆಸಿದ ನ್ಯಾಯಮೂರ್ತಿ  ಬಿ.ಹಿಂಚೆಗೇರಿ ಅವರಿದ್ದ ನ್ಯಾಯಪೀಠ, ಆರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕೂಡಿದ್ದು, ತಕರಾರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದಾಗಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿ ಎಂದು ಸೂಚಿಸಿದರು. ನ್ಯಾಯಪೀಠದ ಆದೇಶದಲ್ಲಿ ಅರ್ಜಿಯನ್ನು ಹಿಂಪಡೆದರು.

ಸಂವಿಧಾನದ ಅನುಚ್ಛೇದ 164ರ ಪ್ರಕಾರ ಒಟ್ಟು ಶಾಸಕರಲ್ಲಿ ಶೇ.15 ರಷ್ಟು ಮಾತ್ರ ಸಚಿವರಿರಬೇಕು ಎಂಬ ನಿಯಮವಿದೆ. ಆದರೆ ಸರ್ಕಾರ ನಿಯಮವನ್ನು ಉಲ್ಲಂಘಿಸಿ ಸಚಿವರ ಸ್ಥಾನಮಾನ ನೀಡಿ 11 ಜನ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಇದು ಸಂವಿಧಾನ ಬಾಹಿರ. ಸರ್ಕಾರದ ಈ ನಿರ್ಧಾರದಿಂದಾಗಿ ಸಾರ್ವಜನಿಕರ  ತೆರಿಗೆ ಹಣವನ್ನು ಅನಗತ್ಯವಾಗಿ ದುಂದು ವೆಚ್ಚಕ್ಕೆ ಮುಂದಾಗಿದೆ ಎಂದು ಆರೋಪಿಸಲಾಗಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com