ಪಶುಸಂಗೋಪನ ಸಚಿವ ಎ ಮಂಜು
ಪಶುಸಂಗೋಪನ ಸಚಿವ ಎ ಮಂಜು

ಶೀಘ್ರವೇ 350 ಪಶುವೈದ್ಯರ ನೇಮಕಾತಿ

350 ಪಶುವೈದ್ಯರ ನೇಮಕಾತಿ ಶೀಘ್ರವೇ ಆರಂಭವಾಗಲಿದೆ ಎಂದು ಪಶುಸಂಗೋಪನ ಸಚಿವ ಎ ಮಂಜು ತಿಳಿಸಿದ್ದಾರೆ.

ಬೆಂಗಳೂರು: 350 ಪಶುವೈದ್ಯರ ನೇಮಕಾತಿ ಶೀಘ್ರವೇ ಆರಂಭವಾಗಲಿದೆ ಎಂದು ಪಶುಸಂಗೋಪನ ಸಚಿವ ಎ ಮಂಜು ತಿಳಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಪಶುವೈದ್ಯಕೀಯ ತಾಂತ್ರಿಕ ಮತ್ತು ಸೇವಾ ವಿಷಯಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, 350 ಪಶುವೈದ್ಯ ನೇಮಕದ ಜತೆಗೆ ಇನ್ನೂ 450 ಹುದ್ದೆಗಳನ್ನು ಭಾರ್ತಿ ಮಾಡಲಾಗುವುದು ಎಂದರು.
ಪಶುವೈದ್ಯರಿಗೆ ವಿಶೇಷ ಭತ್ಯೆ ನೀಡಿರುವ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಶು ಇಲಾಖೆ ಪುನಾರಚನೆ ಕೂಡಾ ಇನ್ನು 2 ತಿಂಗಳಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲು ದಿನಾಂಕ ನಿಗದಿಪಡಿಸಿರುವ ಮಾದರಿಯಲ್ಲಿ ಪಶುಗಳಿಗೂ ಸಹ ಚುಚ್ಚು ಮದ್ದು ಹಾಕಲು ದಿನಾಂಕ ನಿಗದಿಪಡಿಸುವ ಕುರಿತು ಚಿಂತಿಸಲಾಗುತ್ತಿದೆ. ಹಳ್ಳಿಗಳಿಗೆ ಪಶುವೈದ್ಯರು ಹೋದಾಗ ಕೆಲವೆಡೆ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಹೀಗಾಗಿ ರಾಜ್ಯಾದ್ಯಂತ ಒಂದು ದಿನ ಅಭಿಯಾನದಂತೆ ಕಾರ್ಯಕ್ರಮ ನಡೆಸಿದರೆ ಎಲ್ಲಾ ಪಶುಗಳಿಗೂ ಚುಚ್ಚು ಮದ್ದು ಹಾಕಲು ಸಾಧ್ಯ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.  

Related Stories

No stories found.

Advertisement

X
Kannada Prabha
www.kannadaprabha.com