ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ಯಲ್ಲಮ್ಮದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ
ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ...
ಅಥಣಿ: ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ಕೊಕಟನೂರಿನ ಯಲ್ಲಮ್ಮ ದೇವಿಯ ಜಾತ್ರೆ ಆರಂಭವಾಗಿತ್ತು.
ಆರಂಭದ ಎರಡು ದಿನ ಪ್ರಾಣಿ ಬಲಿ, ನೈವೇದ್ಯ ಇರಲಿಲ್ಲ. ಆದರೆ ಗುರುವಾರ ಪೊಲೀಸರು ಹಾಗೂ ಪ್ರಾಣಿ ದಯಾ ಸಂಘದವರ ಕಣ್ಣು ತಪ್ಪಿಸಿ ಮಾತಂಗಿ ದೇವಿಗೆ ಪ್ರಾಣಿ ಮಾಂಸ ನೈವೇದ್ಯ ಮಾಡಿದರು. ದೇವಾಲಯದ ಮುಂಭಾಗ ಅಥವಾ ಹತ್ತಿರದಲ್ಲಿ ಪ್ರಾಣಿ ಬಲಿ ನಡೆದಿಲ್ಲ.
ಬದಲು ಸ್ವಲ್ಪ ದೂರದಲ್ಲಿ ದೂರದ ಗ್ರಾಮಗಳಿಂದ ಬಂದ ಜನರು ಟೆಂಟ್ ಹಾಕಿಕೊಂಡು ಅಲ್ಲಿಯೇ ಪ್ರಾಣಿ ಬಲಿ ನಡೆಸಿ ಮಾತಂಗಿ ದೇವಿಗೆ ನೈವೇದ್ಯ ಅರ್ಪಿಸಿದರು. ದೂರದ ಹೊಲಗಳಲ್ಲಿ, ವಾಹನ ನಿಲ್ಲಿಸುವ ಸ್ಥಳಗಳಲ್ಲಿ ಪ್ರಾಣಿ ಬಲಿ ಮಾಡಲಾಗಿದ್ದು, ಅಲ್ಲಲ್ಲಿ ರಕ್ತವೂ ಬಿದ್ದಿದೆ. ಮಾಂಸಗಳನ್ನು ನೇತು ಹಾಕಿದ ದೃಶ್ಯಗಳೂ ಪತ್ರಕರ್ತರ ಕಣ್ಣಿಗೆ ಬಿದ್ದವು. ಆದರೆ ಇದನ್ನು ತಡೆಯಬೇಕಾದ ತಾಲೂಕು ಆಡಳಿತದ ಯಾವ ಅಧಿಕಾರಿಯೂ ಅಲ್ಲಿ ಇರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ