12 ರಿಂದ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿ

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿರುವ ಆದೇಶ ಜ.12ರಂದು ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್  ಕಡ್ಡಾಯಗೊಳಿಸಲಾಗಿರುವ ಆದೇಶ ಜ.12ರಂದು ರಾಜ್ಯಾದ್ಯಂತ ಜಾರಿಗೆ ಬರಲಿದೆ. ಸುಪ್ರಿಂಕೋರ್ಟ್ ಸ್ಪಷ್ಟ ಸೂಚನೆ ಮೆರೆಗೆ ಸರ್ಕಾರ ಈ ಆದೇಶ ಜಾರಿಗೆ ತರುವುದು ಅನಿವಾರ್ಯವಾಗಿದೆ. ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವ ಆದೇಶಕ್ಕೆ ಸಾರ್ವಜನಿಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತ ವಾಗಿದೆ.

ಸವಾರರ ಸುರಕ್ಷತೆ ದೃಷ್ಟಿ ಯಿಂದ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಸೂಕ್ತ ಎನ್ನುವುದು ಕೆಲವರ ಅಭಿಪ್ರಾಯ. ಇನ್ನು ಕೆಲವರು ಈ ಆ ದೇಶದ ವಿರುದಟಛಿ ಕೆಂಡಕಾರುತ್ತಿದ್ದಾರೆ. ಸುಪ್ರಿಂ ಕೋರ್ಟ್ ತಜ್ಞರ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ ರಾಜ್ಯಗಳಿಗೂ ಅನ್ವಯವಾ ಗುವಂತೆ ಕೊರ್ಟ್ ಸ್ಪಷ್ಟವಾಗಿ ಸೂಚಿಸಿದೆ. ತಮಿಳುನಾಡು, ಕೇರಳ, ತೆಲಂ ಗಾಣ, ದೆಹಲಿಯಲ್ಲಿ ಆದೇಶ ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕ ದಲ್ಲೂ ಈ ಸಂಬಂಧ ಡಿ.31 ರಂದು ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸ ಲಾಗಿದೆ.

ಜ.12ರೊಳಗೆ ಆದೇಶ ಜಾರಿ ಮಾಡಿ ಸುಪ್ರಿಂ ಕೋರ್ಟ್‍ಗೆ ಅನುಷ್ಠಾನ ವರದಿ ಒಪ್ಪಿಸಬೇ ಕಿದೆ. ಒಂದು ವೇಳೆ ಅನುಷ್ಠಾನ ವಿಳಂಬವಾ ದಲ್ಲಿ ನ್ಯಾಯಾಂಗ ನಿಂದನೆ ಆರೋಪದ ಎದುರಾಗಲಿದೆ. ಹೀಗಾಗಿ ಜ.12ರಂದು ಆದೇಶ ಜಾರಿಗೊಳಿಸಬಹುದೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com