ಊಹೆಯಿಂದ ನ್ಯಾ.ಆಡಿ ಅರ್ಜಿ ಸಲ್ಲಿಸಿದ್ದಾರೆ: ಹೈ ಕೋರ್ಟ್ ಗೆ ಸರ್ಕಾರದ ಹೇಳಿಕೆ

ಉಪಲೋಕಾಯುಕ್ತ ಸುಭಾಷ್ ಬಿ.ಆಡಿಯವರ ಪದಚ್ಯುತಿ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂಬುದಾಗಿ ಊಹಿಸಿಕೊಂಡು ಅರ್ಜಿ ಸಲ್ಲಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.
ನ್ಯಾ.ಸುಭಾಷ್ ಬಿ.ಆಡಿ(ಸಂಗ್ರಹ ಚಿತ್ರ)
ನ್ಯಾ.ಸುಭಾಷ್ ಬಿ.ಆಡಿ(ಸಂಗ್ರಹ ಚಿತ್ರ)

ಬೆಂಗಳೂರು: ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಆಡಿಯವರ ಪದಚ್ಯುತಿ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂಬುದಾಗಿ ಊಹಿಸಿಕೊಂಡು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದೆ.

ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸ್ಪೀಕರ್ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಕೈ ಕಟ್ಟಿ ಹಾಕಿದಂತಾಗಿದೆ ಎಂದು ನ್ಯಾ.ಅಶೋಕ ಬಿ.ಹಿಂಚಿಗೇರಿ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ೧೭ ಪುಟಗಳ ಆಕ್ಷೇಪಣೆಯಲ್ಲಿ ತಿಳಿಸಿದೆ. ಪದಚ್ಯುತಿ ಪ್ರಸ್ತಾವನೆ ಇಲ್ಲಿಯವರೆಗೂ ಅಂಗೀಕಾರವಾಗಿಲ್ಲ. ಸ್ಪೀಕರ್  ಕೇವಲ ನಿರ್ಣಯವನ್ನು ಪುರಸ್ಕರಿಸಿದ್ದು ಪ್ರಕ್ರಿಯೆ ಇನ್ನು ಪ್ರಾಥಮಿಕ ಹಂತದಲ್ಲಿರುವಾಗ ಈಗಾಗಲೆ ಪದಚ್ಯುತಿಗೊಳಿಸಲಾಗಿದೆ ಎಂದು ಸುಭಾಶ್ ಆಡಿ ಅವರು  ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ದರಿಂದ  ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರ ತಿಳಿಸಿದೆ.

ಉಪ ಲೋಕಾಯುಕ್ತ ಹುದ್ದೆಯಿಂದ ಪದಚ್ಯುತಗೊಳಿಸುವ ಸಂಬಂಧ ರಾಜ್ಯ ವಿಧಾನಸಭೆಯಲ್ಲಿ 79 ಶಾಸಕರು ಕೈಗೊಂಡ ನಿರ್ಣಯವನ್ನು ಸ್ಪೀಕರ್ ಸ್ವೀಕರಿಸಿರುವ ಬಗ್ಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯವರು ಲೋಕಾಯುಕ್ತ ರಿಜಿಸ್ಟ್ರಾರ್‍ಗೆ ಡಿ.3ರಂದು ಬರೆದಿದ್ದ ಪತ್ರ ಪ್ರಶ್ನಿಸಿ ನ್ಯಾ.ಸುಭಾಷ್ ಬಿ.ಆಡಿ ಅವರು ಅರ್ಜಿ ಸಲ್ಲಿಸಿದ್ದಾಗ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಈ ಆಕ್ಷೇಪಣೆ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com