ಎಚ್.ಎನ್ ಹುಟ್ಟೂರು ದೇಶದ ಮೊದಲ ಹೊಗೆ ಮುಕ್ತ ಗ್ರಾಪಂ

ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ ಅವರ ಹುಟ್ಟೂರು ಹೊಸೂರು ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಧಾನಸಭಾ ಉಪ ಸಭಾಪತಿ ...
ಎಚ್.ನರಸಿಂಹಯ್ಯ, (ಸಂಗ್ರಹ ಚಿತ್ರ)
ಎಚ್.ನರಸಿಂಹಯ್ಯ, (ಸಂಗ್ರಹ ಚಿತ್ರ)

ಗೌರಿಬಿದನೂರು: ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ ಅವರ ಹುಟ್ಟೂರು ಹೊಸೂರು ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಧಾನಸಭಾ ಉಪ ಸಭಾಪತಿ ಎಚ್.ಎನ್ ಶಿವಶಂಕರ ರೆಡ್ಡಿ ಮತ್ತು ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರು ಹೊಗೆ ಮುಕ್ತ ಗ್ರಾ. ಪಂ ಅನ್ನು ಲೋಕಾರ್ಪಣೆ ಮಾಡಿದರು.

ಹೊಸೂರಿನ ಡಾ.ಎಚ್.ಎನ್ ಪ್ರೌಢಶಾಲಾ ಸಭಾಂಗಣದಲ್ಲಿ ಆಹಾರ ಇಲಾಖೆ, ರಾಘವೇಂದ್ರ ಟ್ರಸ್ಟ್ ಎಜುಕೇಷನ್ ಆಂಡ್ ಎನ್ವಿರಾನ್ಮೆಂಟ್ ಆಕ್ಷನ್ ನೀಡ್ಸ್ ಎಂಬ ಸ್ವಯಂ ಸೇವಾ ಸಂಸ್ಥೆ ಹೊಸೂರು ಗ್ರಾ ಪಂ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಮಾರು 1.470 ಕುಟುಂಬಗಳನ್ನು ಹೊಂದಿರುವ ಗ್ರಾಮದಲ್ಲಿ 1.125 ಮನೆಗಳಿಗೆ ಈಗಾಗಲೇ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 345 ಕುಟುಂಬಗಳಿಗೆ ಕೇಂದ್ರ ಸರ್ಕಾರದ ಸಮುದಾಯ ಸಾಮಾಜಿಕ ಬದ್ಧತಾ ಯೋಜನೆಯಡಿ ಕೇವಲ ರು.1600, ರು. 1.450 ರೆಗ್ಯುಲೇಟರ್ 150 ಕ್ಕೆ ಸಂಪರ್ಕ ನೀಡಲಾಗಿದೆ ಎಂದರು.

ಬಯಲು ಶೌಚ ರಹಿತ ಗ್ರಾಮವಾಗಿಯೂ ಹೊಸೂರು ಗ್ರಾಮವನ್ನು ಮಾಡಲಾಗುವುದು. ಶ್ರೇಣಿಕ್ ಎಂಟರ್ ಪ್ರೈಸಸ್ ಮಾಲಿಕ ಗೀತ ಜಯಂತ್ ಶ್ರಮ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಿದೆ ಎಂದು ಹೇಳಿದರು.

ಶಾಸಕ ಎನ್. ಎಚ್ ಶಿವಶಂಕರ ರೆಡ್ಡಿ ಜಿಲ್ಲಾಧಿಕಾರಿ, ಡಾ.ಎಂ.ವಿ ವೆಂಕಟೇಶ್ ತಾಪಂ ಮಾಜಿ ಅಧ್ಯಕ್ಷ ಎಚ್.ವಿ ಮಂಜುನಾಥ್ ಮಾತನಾಡಿದರು. ಇದೇ ಗ್ರಾಮ ದೇಶದ ಮೊದಲ ಹೊಗೆ ರಹಿತ ಗ್ರಾಮಏ ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com