ಡೆಪ್ಯುಟಿ ಸ್ಪೀಕರ್ ಎದುರು ಗೈರಾದ್ದಕ್ಕೆ ಸ್ವಪಕ್ಷೀಯರ ವಿರುದ್ಧ ಖರ್ಗೆ ಅತೃಪ್ತಿ

ಲೋಕಸಭೆ ಉಪ ಸಭಾಧ್ಯಕ್ಷ ತಂಬಿ ದೊರೈ ಎದುರು ರಾಜ್ಯದಲ್ಲಿ ನಿರೀಕ್ಷಿತ ಗೌರವ ಸಿಗದಿರುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತ ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಲೋಕಸಭೆ ಉಪ ಸಭಾಧ್ಯಕ್ಷ ತಂಬಿ ದೊರೈ ಎದುರು ರಾಜ್ಯದಲ್ಲಿ ನಿರೀಕ್ಷಿತ ಗೌರವ ಸಿಗದಿರುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯ ಸದ್ಬಳಕೆ ಕುರಿತ ಪರಿಶೀಲನಾ ಸಮಿತಿ ಉಪ ಸಭಾಧ್ಯಕ್ಷ  ತಂಬಿದೊರೈ  ನೇತೃತ್ವದಲ್ಲಿ  ಆಗಮಿಸಿದರೂ ರಾಜ್ಯದಿಂದ ಸ್ಪೀಕರ್ ಛೇರ್ಮನ್ , ಯಾವುದೇ ಸಚಿವರು ಅಧಿಕಾರಿಗಳು ಬಾರದೇ ಅಪಮಾನಿಸಿದ್ದು ಸರಿಯಲ್ಲ ಎಂದು ಖರ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಚಾರವಾಗಿಯೂ ಸಿಎಂ ಸಿದ್ದರಾಮಯ್ಯ ವಿಚಾರವಾಗಿಯೂ  ಕೊಂಚ ಬೇಸರಗೊಂಡಿದ್ದ ಅವರು ಉಪ ಸಭಾಧ್ಯಕ್ಷರ ಮುಂದೆ ತಾವು ವಿಧಾನಸೌಧದಲ್ಲೇ ಮುಜುಗರ ಅನುಭವಿಸುವಂತಾಯ್ತು  ಎಂದು ನೊಂದುಕೊಂಡರು ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ  ಸಂಸದ ಕೆ.ಎಚ್ ಮುನಿಯಪ್ಪ  ಸಹ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಂಸತ್ ನಿಯೋಗ ಬಂದಾಗ ಈ ರೀತಿ ಆಗಬಾರದಿತ್ತು.  ವಿಧಾನ ಮಂಡಲದ ಉಭಯ ಸದನಗಳ ಪೀಠಾದಿಪತಿಗಳು ಎಷ್ಟೇ ದೊಡ್ಡ ಕೆಲಸವಿದ್ದರೂ ಅದನ್ನು ಬದಿಗೊತ್ತಿ ಸಭೆಯಲ್ಲಿ  ಪಾಲ್ಗೊಳ್ಳಬೇಕಾಗಿತ್ತು. ಈ ಬೆಳವಣಿಗೆ ಸ್ವೀಕಾರ್ಹವಲ್ಲ ಎಂದರು.

ವಾಹನಕ್ಕೆ ಪ್ರವೇಶವಿಲ್ಲ. ಲೋಕಸಭೆ ಉಪಸಭಾಧ್ಯಕ್ಷ ತಂಬಿದೊರೈ ಅವರ ವಾಹನವನ್ನು ವಿಧಾನಸೌಧದ ಧ್ವಾರದವರೆಗೆ ಬಿಡದೇ ತಡೆಯಲಾಗಿತ್ತು. ಪೊಲೀಸರ ಈ ಕ್ರಮಕ್ಕೆ ತಂಬಿದೊರೈ ಅವರು ಖರ್ಗೆ ಅವರ ಬಳಿ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.  ನಿಮ್ಮ ಪೊಲೀಸರು ಉಪಸಭಾಧ್ಯಕ್ಷರಾದ ತಮ್ಮ ವಾಹನವನ್ನೇ ತಡೆ ಹಿಡಿದಿದ್ದಾರೆ ಎಂದು ಬೇಸರಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com