ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಕಳವಳಕಾರಿ: ಪ್ರೊ. ಬರಗೂರು ರಾಮಚಂದ್ರಪ್ಪ

ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ಉತ್ತಮ ಸಂಬಂಧಗಳೇ ಶಿಥಿಲಗೊಳ್ಳುತ್ತಿವೆ ಎಂದು ಸಾಹಿತಿ ಪೊ್ರ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
Updated on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ಉತ್ತಮ ಸಂಬಂಧಗಳೇ ಶಿಥಿಲಗೊಳ್ಳುತ್ತಿವೆ ಎಂದು ಸಾಹಿತಿ ಪೊ್ರ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಪ್ರಕಟಿಸಿರುವ ರಘುನಾಥ ಚ.ಹ. ಅವರ `ಪುಟ್ಟಲಕ್ಷ್ಮಿ ಕಥೆಗಳು' ಮತ್ತು ಜಯಪ್ರಕಾಶ್ ಮಾವಿನಕುಳಿ ಅವರ `ಬ್ರಹ್ಮರಾಕ್ಷಸ' ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಂಬಂಧಗಳೇ  ಶಿಥಿಲಗೊಳ್ಳುತ್ತಿರುವುದರಿಂದ ಎಲ್ಲರಲ್ಲೂ ಕಳವಳ ವ್ಯಕ್ತವಾಗುತ್ತಿದೆ. ಹಾಗಾಗಿ ಸಂಬಂಧ ಅಂದರೆ ಏನು? ಎಂಬುದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಕ್ಕಳ ಕಥೆ ಬರೆಯುವಾಗ ಮಕ್ಕಳಂತಾಗಬೇಕು. ವಯೋಮಾನ ಮತ್ತು ಮನೋಭಾವದ ನಡುವೆ ಇರುವ ಕಂದಕವನ್ನು ದಾಟಿ ಮಕ್ಕಳಂತಾದರೆ ಉತ್ತಮ ಕಥೆಗಳು ಮೂಡಲಿದ್ದು, ಇವುಗಳನ್ನು ಓದಿದ ಮಕ್ಕಳಿಗೂ ಖುಷಿ ನೀಡುತ್ತವೆ. ಬಾಲ್ಯಾವಸ್ಥೆಗೆ ಹೋಗಿ ಕವಿತೆ ಹಾಗೂ ಕಥೆ ಸೃಷ್ಟಿಸುವುದು ಸುಲಭವಲ್ಲ. ಆದರೆ, ರಘುನಾಥ ಚ.ಹ ಅವರು ಮಕ್ಕಳ ಮನಮುಟ್ಟುವ ಕಥೆಗಳನ್ನು ಸೃಷ್ಟಿಸಿದ್ದಾರೆ.

ಅವರ ಕಥೆಯಲ್ಲಿ ಬರುವ ಪುಟ್ಟಲಕ್ಷ್ಮಿಯ ಆತ್ಮವಿಶ್ವಾಸ, ಧೈರ್ಯವನ್ನು ಕಥೆಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕತೆಗಾರ ಎಸ್.ದಿವಾಕರ್ ಮಾತನಾಡಿ, ಮಕ್ಕಳು ಕೇಳುವ ಪ್ರಶ್ನೆಗಳು ಮುಗ್ಧವಾಗಿದಷ್ಟು ಒಳ್ಳೆಯದು. ಮಕ್ಕಳಿಗೆ ನಗರ-ಹಳ್ಳಿ ಎಲ್ಲವೂ ಒಂದೇ. ದೊಡ್ಡವರಿಗೆ ಭಯವಾಗುವ ವಿಚಾರ, ಮಕ್ಕಳಿಗೆ ಭಯ ಹುಟ್ಟಿಸುವುದಿಲ್ಲ. ಹಾಗಾಗಿ ಮಕ್ಕಳ ಜಗತ್ತು ಸದಾ ಉಲ್ಲಾಸದಾಯಕವಾಗಿರುತ್ತದೆ ಎಂದರು. ಕವಿ ಎಲ್.ಎನ್.ಮುಕುಂದರಾಜ್ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com