ಪುರಾಣಗಳ ಆಂತರ್ಯ ಆಧ್ಯಾತ್ಮ : ನ್ಯಾ. ವೆಂಕಟಾಚಲಯ್ಯ

ಹಿಂದೂ ಧರ್ಮ ಮತ್ತು ಪುರಾಣಶಾಸ್ತ್ರಗಳ ಮುಖ್ಯ ಉದ್ದೇಶ ಆಧ್ಯಾತ್ಮ ವೇ ಆಗಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ನ್ಯಾ. ಎಂ.ಎನ್. ವೆಂಕಟಾಚಲಯ್ಯ
ನ್ಯಾ. ಎಂ.ಎನ್. ವೆಂಕಟಾಚಲಯ್ಯ

ಬೆಂಗಳೂರು: ಹಿಂದೂ ಧರ್ಮ ಮತ್ತು ಪುರಾಣ, ಶಾಸ್ತ್ರಗಳ ಮುಖ್ಯ ಉದ್ದೇಶ ಆಧ್ಯಾತ್ಮ ವೇ ಆಗಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ಇಸ್ಕಾನ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಲ ಪ್ರಭುಪಾದರ ಕುರಿತಾದ ಡಾ. ಬಾಬು ಕೃಷ್ಣಮೂರ್ತಿ ವಿರಚಿತ ಮಹಾಸಾಧಕ ಕಾದಂಬರಿಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಪ್ರಭುಪಾದರು ಆಧ್ಯಾತ್ಮಿಕ ವಿಚಾರವನ್ನು ವಿಶ್ವಾದ್ಯಂತ ಪ್ರಚಾರ ಮಾಡಿದರು. ಶ್ರೀಕೃಷ್ಣನ  ಸ್ಮರಣೆಯಲ್ಲಿ ಜನರಿಗೆ ತಿಳಿವಳಿಕೆ ಮೂಡಿಸಿದ ಪ್ರಭುಪಾದರ ಸಂದೇಶಗಳು ಈ ಪುಸ್ತಕದಲ್ಲಿ ಸೊಗಸಾಗಿ ಅಡಕವಾಗಿವೆ ಎಂದರು.

ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪೊ್ರ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಗಳಗನಾಥರು ಮೊಟ್ಟ ಮೊದಲು ವ್ಯಕ್ತಿ ವಿಚಾರಕ್ಕೆ ಸಂಬಂಧಿಸಿದ ಮಾಧವ ಕರುಣಾ ವಿಲಾಸ ಎಂಬ ಕಾದಂಬರಿ ಬರೆದರು. ವಿದ್ಯಾರಣ್ಯರ ಕುರಿತಾದ ಆ ಕಾದಂಬರಿ ಸಾಕಷ್ಟು ಹೆಸರು ಮಾಡಲಿಲ್ಲವಾದರೂ ಅದೊಂದು ಮೈಲಿಗಲ್ಲು. ಆ ಕೃತಿಯನ್ನು ಓದಿದಷ್ಟೇ ಅನುಭವ ಮಹಾಸಾಧಕ ಕಾದಂಬರಿಯಲ್ಲಿ ಆಗುತ್ತದೆ ಎಂದರು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸ, ಉಪಾಧ್ಯಕ್ಷ ಚಂಚಲಾಪತಿ ದಾಸ, ಸ್ತೋಕ ಕೃಷ್ಣದಾಸ, ಲೇಖಕ ಡಾ. ಬಾಬು ಕೃಷ್ಣಮೂರ್ತಿ ಉಪಸ್ಥಿತರಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com