ಕೆಎಸ್ ಆರ್ ಟಿಸಿಯಿಂದ ಸಂಕ್ರಾಂತಿಗೆ ಹೆಚ್ಚುವರಿ ಬಸ್:ಟಿಕೆಟ್ ಬುಕ್ಕಿಂಗ್ ಗೆ ಶೇ.5 ರಷ್ಟು ರಿಯಾಯಿತಿ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೆಎಸ್‌‌ಆರ್‌‌ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಜ.14, 15ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್ ...
ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್

ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೆಎಸ್‌‌ಆರ್‌‌ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಜ.14, 15ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್ ಹಾಗೂ ಜ. 17ರಂದು ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚುವರಿಯಾಗಿ ಒಟ್ಟು 500 ಬಸ್‌‌‌‌‌‌‌‌ಗಳ ವ್ಯವಸ್ಥೆ ಮಾಡಿದ್ದು, ಮೆಜೆಸ್ಟಿಕ್‌ನಿಂದ ತಿರುಪತಿ, ಬೀದರ್, ಯಾದಗಿರಿ, ಕಲಬುರ್ಗಿ, ಬಳ್ಳಾರಿ, ರಾಯಚೂರು, ಕಾರವಾರ, ಶಿರಸಿ, ಗೋಕರ್ಣ, ವಿಜಯಪುರ ಹಾಗೂ ಇನ್ನಿತರ ಸ್ಥಳಗಳಿಗೆ ಬಸ್‌‌ಗಳು ಹೊರಡಲಿವೆ.

ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ ಹಾಗೂ ಕಾರವಾರದತ್ತ ಸಂಚರಿಸುವ ಮುಂಗಡ ಟಿಕೆಟ್ ಕಾಯ್ದಿರಿಸಿದ ವಿಶೇಷ ಬಸ್‌‌‌‌‌‌‌‌‌‌ಗಳು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಡಲಿವೆ. ಮುಂಗಡ ಕಾಯ್ದಿರಿಸದ ಬಸ್‌‌‌‌‌‌‌‌‌‌‌‌‌ಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಹೊರಡಲಿವೆ.

ಕಲಬುರ್ಗಿ, ಬಳ್ಳಾರಿ, ರಾಯಚೂರು, ಹೊಸಪೇಟೆ, ಕೊಪ್ಪಳ ಯಾದಗಿರಿ ಬೀದರ್ ಕಡೆಗೆ ಹೋಗುವ ಮುಂಗಡ ಟಿಕೆಟ್ ಕಾಯ್ದಿರಿಸಿದ ಬಸ್‌‌‌‌‌‌‌‌ಗಳು ಪೀಣ್ಯ ನಿಲ್ದಾಣದಿಂದ ಹೊರಡಲಿವೆ. ಕಾಯ್ದಿರಿಸದ ಬಸ್‌‌‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದಲೇ ಹೊರಡಲಿವೆ.
ಇನ್ನು ಪ್ರತಿಬಾರಿಯಂತೆ ಈ ಬಾರಿಯೂ ನಾಲ್ಕು ಮಂದಿಗಿಂತ ಹೆಚ್ಚು ಮಂದಿ ಜೊತೆಯಲ್ಲೇ ಟಿಕೆಟ್ ಬುಕ್ ಮಾಡಿಕೊಂಡಲ್ಲಿ ಟಿಕೆಟ್ ದರದಲ್ಲಿ 5% ವಿನಾಯಿತಿ ದೊರೆಯಲಿದೆ. ಇನ್ನು ವಾಪಸಾತಿ ಟಿಕೆಟ್‌‌ನ್ನು ಕೂಡಾ ಜೊತೆಯಲ್ಲೇ ಬುಕ್ ಮಾಡಿದ್ರೆ 10% ರಿಯಾಯಿತಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com