ಬೆಂಗಳೂರು- ಬಳ್ಳಾರಿ ಕಾರಿಡಾರ್ ಗೆ ಕ್ರಮ

ಚೆನ್ನೈ- ಬೆಂಗಳೂರು-ಬಳ್ಳಾರಿ ಮತ್ತು ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಮಹದೇವಪ್ರಸಾದ್ ಹೇಳಿದರು.
ಸಚಿವ ಮಹದೇವಪ್ರಸಾದ್
ಸಚಿವ ಮಹದೇವಪ್ರಸಾದ್

ಮೈಸೂರು: ಚೆನ್ನೈ- ಬೆಂಗಳೂರು-ಬಳ್ಳಾರಿ ಮತ್ತು ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಮಹದೇವಪ್ರಸಾದ್ ಹೇಳಿದರು.

ನಗರದ ಭಾರತ್ ಮತ್ತು ಸ್ಕೌಟ್ಸ್ ಗೈಡ್ಸ್ ಮೈದಾನದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ- 2016 ಅಂಗವಾಗಿ ಜಿಲ್ಲಾ ಬಂಡಾವಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚೆನ್ನೈ-ಬೆಂಗಳೂರು- ಬಳ್ಳಾರಿ, ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಮಾಡಲಾಗುತ್ತಿದೆ. ಅದೇ ರೀತಿ ಮೈಸೂರು, ಮಂಡ್ಯ- ಚಾಮರಾಜ ನಗರ ಜಿಲ್ಲೆಯಲ್ಲಿ ಕೈಗಾರಿಕಾ ವಲಯವನ್ನು ಹೆಚ್ಚಿಸಲು ಗಮನಹರಿಸಲಾಗಿದೆ. ಅದಕ್ಕಾಗಿ ಪ.ಜಾತಿ- ಪ. ವರ್ಗದವರು ಕೈಗಾರಿಕೆ ಸ್ಥಾಪಿಸಿದರೆ ಶೇ.40ರಷ್ಟು ರಿಯಾಯಿತಿ ಸೇರಿದಂತೆ ಇತರ ಸೌಲಭ್ಯ ಕಲ್ಪಿಸ ಲಾಗುತ್ತಿದೆ. ಕಬಿನಿಯಿಂದ ಬದನೆಗುಪ್ಪೆ ಬಳಿಗೆ ನೀರಿನ ಸೌಲಭ್ಯ ಒದಗಿಸಲು ಟೆಂಡರ್ ಕರೆಯಲಾಗುತ್ತಿದೆ. ಇಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾನರ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸರ್ಕಾರದ ಪ್ರೋತ್ಸಾಹ; ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸರ್ಕಾರ ಸಿದಟಛಿವಿದೆ. ಕೈಗಾರಿಕೆಗಳ ಅಭಿವೃದ್ಧಿ, ಹೊಸ ಉದ್ಯಮ ಸ್ಥಾಪನೆಗೆ ಬೇಕಾದ ನೆರವು, ಪ್ರೋತ್ಸಾಹ ಮತ್ತು ಮೂಲಭೂತ ಸೌಲಭ್ಯ ಒದಗಿಸಲು ಗಮನ ಹರಿಸಲಾಗುವುದು. ಏಕೆಂದರೆ ದೇಶದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಐಟಿಬಿಟಿ ಉದ್ಯಮ ಆರಂಭವಾದ ಮೇಲೆ ಕೈಗಾರಿಕಾ ಕ್ರಾಂತಿ ಉಂಟಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com