ಪ್ರಯಾಣಿಕರೇ ಗಮನಿಸಿ: ನಮ್ಮ ಮೆಟ್ರೋ ಟನಲ್ ಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ!

ಆದರೆ ಮೆಟ್ರೋ ಆಧುನಿಕ ಸೌಲಭ್ಯಗಳನ್ನು ಹೊಂದಿದೆಯಾದರೂ ಟನಲ್ ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಗೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ!
ನಮ್ಮ ಮೆಟ್ರೋ(ಸಂಗ್ರಹ ಚಿತ್ರ)
ನಮ್ಮ ಮೆಟ್ರೋ(ಸಂಗ್ರಹ ಚಿತ್ರ)

ಬೆಂಗಳೂರು: ಜೂನ್ ವೇಳೆಗೆ ನಮ್ಮ ಮೆಟ್ರೋದ ಮೊದಲನೇ ಹಂತ ಸಂಚಾರಕ್ಕೆ ಮುಕ್ತವಾಗಲಿದೆ.
ಆದರೆ ಮೆಟ್ರೋ ಆಧುನಿಕ ಸೌಲಭ್ಯಗಳನ್ನು ಹೊಂದಿದೆಯಾದರೂ ಟನಲ್ ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಗೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ!
ಕಾಮಗಾರಿ ವೇಳೆ ಮೊಬೈಲ್ ಸಂಪರ್ಕ ಸಿಗುವ ಸೌಲಭ್ಯವನ್ನು ಒದಗಿಸಿಲ್ಲದೇ ಇರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಎತ್ತರಿಸಿದ ಹಳಿಗಳಿಂದ ನೆಲದ ಮಟ್ಟದಿಂದ ಸುಮಾರು 60 ಅಡಿ ಕೆಳಗಿರುವ ಅಂಡರ್ ಗ್ರೌಂಡ್ ನಲ್ಲಿರುವ ಹಳಿಗಳ ಮೇಲೆ ಮೆಟ್ರೋ ರೈಲು ಸಂಚರಿಸಬೇಕಾದರೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಾಗಲಿದೆ. ಆದರೆ ಇದನ್ನು ತಡೆಗಟ್ಟಲು ಮೆಟ್ರೋ ಈ ವರೆಗೂ ಕ್ರಮ ಕೈಗೊಂಡಿಲ್ಲ.
ಟೆಲಿಕಾಂ ಸಂಪರ್ಕಕ್ಕಾಗಿ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ, ಅಂಡರ್ ಗ್ರೌಂಡ್ ಟನಲ್ ನಿರ್ಮಾಣವನ್ನು ಸಂಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ, ಉಳಿದ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು  ಎಂದು ಬಿಎಂಆರ್ ಸಿಎಲ್ ಎಂಡಿ ಪ್ರದೀಪ್ ಸಿಂಗ್ ಖರೋಲ ಹೇಳಿದ್ದಾರೆ.
ನೆಟ್ವರ್ಕ್ ಸಮಸ್ಯೆ ಎದುರಾಗದಂತೆ ಮಾಡಲು ಮೆಟ್ರೋ ರೈಲುಗಳು ಸಂಚರಿಸದ ವೇಳೆ ಅಂಡರ್ ಗ್ರೌಂಡ್ ಕಾರಿಡಾರ್ ನಲ್ಲಿ ಕೇಬಲ್ ಗಳನ್ನು ಹಾಕುವುದಕ್ಕೆ ಅವಕಾಶ ಮಾಡಲಾಗುವುದು, ಅದಕ್ಕೂ ಮುನ್ನ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದು ಎಂದು ಖರೋಲಾ ತಿಳಿಸಿದ್ದಾರೆ. 
ಅಂಡರ್ ಗ್ರೌಂಡ್ ನಲ್ಲಿ ನೆಟ್ವರ್ಕ್ ಸಂಪರ್ಕ ದೊರೆಯುವಂತೆ ಮಾಡುವುದರ ಬಗ್ಗೆ ಕಳೆದ ವರ್ಷವೇ ಚರ್ಚೆ ನಡೆಸಿ, ಟೆಂಡರ್ ಕರೆಯಲು ನಿರ್ಧರಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂದು ಬಿಎಂಆರ್ ಸಿ ಎಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com