ಎಚ್.ಕೆ.ಪಾಟೀಲ್
ಎಚ್.ಕೆ.ಪಾಟೀಲ್

ಮಹಾರಾಷ್ಟ್ರ ವಿರುದ್ಧ ಸಚಿವರ ಗರಂ

ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬೆಳಗಾವಿ ಗಡಿ ವಿವಾದದ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಮಹಾರಾಷ್ಟದ ವಿರುದ್ಧ ಗುಡುಗಿದ್ದಾರೆ.

ಬೆಂಗಳೂರು: ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬೆಳಗಾವಿ ಗಡಿ ವಿವಾದದ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಮಹಾರಾಷ್ಟದ ವಿರುದ್ಧ ಗುಡುಗಿದ್ದಾರೆ. `ಮುಗಿದಿರುವ ಗಡಿ ವಿವಾದವನ್ನು ಮಹಾರಾಷ್ಟ್ರ ಅನಗತ್ಯವಾಗಿ ಕೆದಕುತ್ತಿದೆ.

ಅಲ್ಲದೇ ಮರಾಠ ಟೈಗರ್ ಎನ್ನುವ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿ ಶಾಂತಿ ಕದಡುತ್ತಿದೆ' ಎಂದು ಪಾಟೀಲ್ ದನಿ ಎತ್ತಿದ್ದಾರೆ. ಮಹಾರಾಷ್ಟ್ರ ಗಡಿ ಸಮಸ್ಯೆಗೆಂದೇ ಉಸ್ತುವಾರಿ ಸಚಿವರನ್ನು ನೇಮಿಸಿದಂತೆ ಕರ್ನಾಟಕ ಕೂಡ ಮಂಗಳವಾರ ಪಾಟೀಲ್ ಅವರನ್ನು ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ- ಕರ್ನಾಟಕದ ಮಧ್ಯೆ ಗಡಿ ವಿವಾದವೇ ಇಲ್ಲ. ಇದ್ದಂತ ವಿವಾದ ಜವಾಹರ ಲಾಲ್ ನೆಹರು ಕಾಲದಲ್ಲೇ ಮುಗಿದಿದೆ. ಮಹಾಜನ ಆಯೋಗದ ವರದಿಯೇ ಅಂತಿಮ ಎಂದು ಒಪ್ಪಿಕೊಂಡ ಮಹಾರಾಷ್ಟ್ರ ಅನಗತ್ಯವಾಗಿ ತಗಾದೆ ತೆಗೆಯುತ್ತಿದೆ ಎಂದು ಟೀಕಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com