ಕೆಂಗೇರಿಯಲ್ಲಿ ಕಡಲೇಕಾಯಿ ಪರಿಷೆ

ಕೆಂಗೇರಿ ಸುತ್ತಮುತ್ತಲ ಗ್ರಾಮಸ್ಥರು ಬಸವೇಶ್ವರನ ಸನ್ನಿಧಾನದಲ್ಲಿ ಕಡಲೆಕಾಯಿ ಪರಿಷೆಯನ್ನು ಏಳುವರ್ಷಗಳಿಂದ ಬಂದಿದ್ದಾರೆ ಎಂಬುದು ಕುತೂಹಲ ಸಂಗತಿಯಾಗಿದೆ.
ಕಡಲೇಕಾಯಿ ಪರಿಷೆ(ಸಂಗ್ರಹ ಚಿತ್ರ)
ಕಡಲೇಕಾಯಿ ಪರಿಷೆ(ಸಂಗ್ರಹ ಚಿತ್ರ)

ಬೆಂಗಳೂರು: ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಪ್ರಸಿದ್ಧಿ ಹೊಂದಿರುವುದು ಎಲ್ಲರಿಗೂ ಗೊತ್ತು. `ಸುಗ್ಗಿ ಹಬ್ಬ ಸಂಕ್ರಾಂತಿ'ಯಂದು ನಗರ ಹೊರವಲಯದ ಕೆಂಗೇರಿ ಸುತ್ತಮುತ್ತಲ ಗ್ರಾಮಸ್ಥರು ಬಸವೇಶ್ವರನ ಸನ್ನಿಧಾನದಲ್ಲಿ ಕಡಲೆಕಾಯಿ ಪರಿಷೆಯನ್ನು ಏಳುವರ್ಷಗಳಿಂದ ಬಂದಿದ್ದಾರೆ ಎಂಬುದು ಕುತೂಹಲ ಸಂಗತಿಯಾಗಿದೆ.

ನೈಸ್ ಕಾರಿಡಾರ್ ವೃತ್ತ ಸಮೀಪದ ಚನ್ನವೀರಯ್ಯನಪಾಳ್ಯದ ಸೋಂಪುರ ಬಳಿಯ ವರಹಾಸಂದ್ರದಲ್ಲಿ ಜ. 15ರಂದು ಸಂಕ್ರಾಂತಿಯೊಂದಿಗೆ 7ನೇ ವರ್ಷದ ಕಡಲೆಕಾಯಿ ಪರಿಷೆ ಹಾಗೂಗ್ರಾಮ ದೇವತೆಗಳ ಉತ್ಸವ ವಿಜೃಂಭಣೆಯಿಂದ ನಡೆಸಲು ಸಿದ್ಧತೆ ಭರದಿಂದ ಸಾಗಿವೆ. ಈಗಾಗಲೇ ಸೋಂಪುರದ ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ಕಡಲೆಕಾಯಿ, ಗೆಣಸು ರಾಶಿಯೊಂದಿಗೆ ರೈತರು ಬಿಡಾರ ಹೂಡಿದ್ದಾರೆ. ಈ ರೀತಿ ವಿನೂತನವಾಗಿ ಸುಗ್ಗಿ ಹಬ್ಬ ಆಚರಿಸುತ್ತಾ ಬಂದಿದ್ದು, ಗ್ರಾಮ ದೇವತೆಗಳ ಉತ್ಸವ, ಗ್ರಾಮೀಣ ಸಂಸ್ಕೃತಿ ಹಬ್ಬ, ಕಿಚ್ಚು ಹಾಯಿಸುವ ಉತ್ಸವದಲ್ಲಿ ಮಿಂದೇಳಲಿದ್ದಾರೆ.

ಇತಿಹಾಸ ಪ್ರಸಿದ್ಧ ಚೋಳರ ಕಾಲದ ಬಸವೇಶ್ವರ ಸ್ವಾಮೀ ದೇವಾಲಯದಲ್ಲಿ ಏಳು ವರ್ಷದಿಂದ ಸಂಕ್ರಾಂತಿ ಹಬ್ಬದೊಂದಿಗೆ ಕಡಲೇಕಾಯಿ ಪರಿಷೆಯನ್ನೂ ಆಚರಿಸಲಾಗುತ್ತಿದೆ. ಪರಿಷೆಗಾಗಿ ರಾಮನಗರ, ಮಾಗಡಿ, ಕನಕಪುರ, ಪಾವಗಡ, ಹೊಸೂರು, ಅನಂತಪುರ, ಚಿತ್ತೂರುಗಳಿಂದ 200 ಟನ್ ಗೂ ಹೆಚ್ಚು ಕಡಲೇಕಾಯಿ ತರಿಸಲಾಗಿದೆ. ಈ ಕಡಲೇಕಾಯಿ ಪರಿಷೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದು ಪ್ರತಿಯೊಬ್ಬರಿಗೂ ಎರಡು ಸೇರು ಕಡಲೇಕಾಯಿ ಜೊತೆಗೆ ಒಂದು ಕಬ್ಬಿಣ ಜಲ್ಲೆ ಉಚಿತವಾಗಿ ನೀಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com