ತಲೆ ನೋವು ಎಂದ ಮಹಿಳಾ ಉದ್ಯೋಗಿಗೆ ವಯಾಗ್ರ ಕೊಟ್ಟ ಮ್ಯಾನೇಜರ್!

ತಲೆನೋವು ಎಂದು ಹೇಳಿದ ಮಹಿಳಾ ಉದ್ಯೋಗಿಗೆ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮ್ಯಾನೇಜರ್ ವಯಾಗ್ರ ಕೊಟ್ಟಿರುವ ಘಟನೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನಡೆದಿದೆ.
ವಯಾಗ್ರ (ಸಂಗ್ರಹ ಚಿತ್ರ)
ವಯಾಗ್ರ (ಸಂಗ್ರಹ ಚಿತ್ರ)
Updated on

ಬೆಂಗಳೂರು: ತಲೆನೋವು ಎಂದು ಹೇಳಿದ ಮಹಿಳಾ ಉದ್ಯೋಗಿಗೆ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮ್ಯಾನೇಜರ್ ವಯಾಗ್ರ ಕೊಟ್ಟಿರುವ ಘಟನೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನಡೆದಿದೆ.  

ಹಣಕಾಸು ಮತ್ತು ಹೂಡಿಕೆ ಸಂಸ್ಥೆಯ ಮ್ಯಾನೇಜರ್ ಮಲ್ಲಪ್ಪ ತನಗೆ ತಲೆನೋವಿಗೆ ಮಾತ್ರೆ ನಿಡುವ ಬದಲು ವಯಾಗ್ರ ಮಾತ್ರೆ ನೀಡಿದ್ದಾರೆ ಎಂದು ಡಾಟಾ ಪ್ರೋಸೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷದ ಮಹಿಳೆ ಆರೋಪಿಸಿದ್ದಾರೆ.

ಮಲ್ಲಪ್ಪ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಲು ಯತ್ನಿಸುತ್ತಿದ್ದ ಮಲ್ಲಪ್ಪ ಕಳೆದ  3-4 ತಿಂಗಳಿಂದ ಕಿರುಕುಳ ನೀಡುತ್ತಿದ್ದ, ಅಲ್ಲದೇ ತನಗೆ ತಲೆನೋವು ಎಂದು ಹೇಳಿದಾಗಲೆಲ್ಲಾ ವಯಾಗ್ರ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ವಯಾಗ್ರ ಮಾತ್ರೆಯ ಕವರ್ ನ್ನು ಫಾರ್ಮಸಿಗೆ ಕೊಂಡೊಯ್ದಾಗ ಮಹಿಳೆಗೆ ತನ್ನ ಸಂಸ್ಥೆಯ ಮ್ಯಾನೇಜರ್ ವಯಾಗ್ರ ನೀಡುತ್ತಿದ್ದ ವಿಷಯ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com