ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಭಕ್ತರ ಎಡೆಸ್ನಾನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಪ್ರಯುಕ್ತ ಪಂಚಮಿ ದಿನವಾದ ಶುಕ್ರವಾರ 52 ಭಕ್ತರು ಎಡೆ ಸ್ನಾನ ಸೇವೆ ಪೂರೈಸಿದರು...
ಕಿರುಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಕಿರುಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಪ್ರಯುಕ್ತ ಪಂಚಮಿ ದಿನವಾದ ಶುಕ್ರವಾರ 52 ಭಕ್ತರು ಎಡೆ ಸ್ನಾನ ಸೇವೆ ಪೂರೈಸಿದರು. ಮಧ್ಯಾಹ್ನ ದೇವರಿಗೆ ಮಹಾಪೂಜೆ ನೆರವೇರಿದ ಬಳಿಕ ದೇವಸ್ಥಾನದ ಹೊರಾಂಗಣದ ಸುತ್ತ ಹಾಕಲಾದ ಬಾಳೆಲೆ ಮೇಲೆ ದೇವರ ನೈವೆಧ್ಯ ಬಡಿಸಿ, ಅದನ್ನು ದೇವಸ್ಥಾನದ ಗೋವುಗಳಿಗೆ ತಿನ್ನಿಸಿ ನಂತರ ಭಕ್ತರು ಉರುಳುಸೇವೆ ನಡೆಸಿದರು. 
ಬ್ರಾಹ್ಮಣರು ಉಂಡ ಎಲೆಯ ಮೇಲೆ ಉರುಳುವ (ಉಚ್ಚಿಷ್ಠ) ಮಡೆ ಮಡೆ ಸ್ನಾನ ಸೇವೆ ಸಂಪ್ರದಾಯ ನಿಷೇಧಗೊಂಡು ಇಂದಿಗೆ ವರ್ಷ ತುಂಬಿದೆ. ಕಳೆದ ವರ್ಷ ಕಿರುಷಷ್ಠಿ ವೇಳೆ 62 ಭಕ್ತರು ಮೊದಲ ಬಾರಿ ಎಡೆಸ್ನಾನ ಸೇವೆ ನಡೆಸಿದ್ದು, ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮಡೆ ಮಡೆ ಸ್ನಾನ ಸೇವೆ ಕುರಿತು ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆ. 
ಈ ನಡುವೆ ಉಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಕ್ಷೇತ್ರದಲ್ಲಿ ಎಡೆಸ್ನಾನಕ್ಕೆ ಅವಕಾಶ ಕಲ್ಪಿಸಿತ್ತು. ಕಳೆದ ತಿಂಗಳು ನಡೆದ ವಾರ್ಷಿಕ ಮಹಾ ಜಾತ್ರೆ ಸಂದರ್ಭದಲ್ಲೂ ಎಡೆ ಸ್ನಾನ ನೆರವೇರಿತ್ತು. ಎರಡು ಬಾರಿ ರಥೋತ್ಸವ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಒಂದೇ ದಿನ ಎರಡು ಬಾರಿ ಪಂಚಮಿ ರಥ ಎಳೆಯಲಾಯಿತು. 
ಮಕರ ಸಂಕ್ರಮಣ ದಿನವಾದ ಶುಕ್ರವಾರ ಬೆಳಗ್ಗೆ ದೇವಾಲಯದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥ ಎಳೆಯಲಾಯಿತು. ನಂತರ ಕಾಜುಕುಜುಂಬ ದೈವದ ನಡಾವಳಿ ನೆರವೇರಿತು. ಬಳಿಕ ಚಿಕ್ಕ ರಥೋತ್ಸವ ನಡೆದು ಸವಾರಿ ಮಂಟಪದಲ್ಲಿ ದೇವರಿಗೆ ಕಟ್ಟೆಪೂಜೆ ನೆರವೇರಿತು. ಕಿರುಷಷ್ಠಿ ಪ್ರಯುಕ್ತ ರಾತ್ರಿ ಮತ್ತೊಮ್ಮೆ ಪಂಚಮಿ ರಥೋತ್ಸವ ನಡೆಯಿತು. ಕಿರುಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com