ಭಯೋತ್ಪಾದನೆ ವಿರುದ್ಧ ಜನಜಾಗೃತಿ ಅಭಿಯಾನ: ಪ್ರವೀಣ್ ತೊಗಾಡಿಯಾ

ಭಯೋತ್ಪಾದನೆ ಜಗತ್ತಿನ ಬಹು ದೊಡ್ಡ ಸವಾಲಾಗಿದ್ದು, ಸರ್ಕಾರ ಅಥವಾ ಸೇನೆ ಯಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಭಾರತವನ್ನು ಭಯೋತ್ಪಾದನೆ...
ಬೆಂಗಳೂರಿನಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪರಿಷತ್ ನ ಕಾರ್ಯದರ್ಶಿ ಸುರೇಂದ್ರ ಕುಮಾರ್, ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಕಾರಿ
ಬೆಂಗಳೂರಿನಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪರಿಷತ್ ನ ಕಾರ್ಯದರ್ಶಿ ಸುರೇಂದ್ರ ಕುಮಾರ್, ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಕಾರಿ
Updated on

ಬೆಂಗಳೂರು: ಭಯೋತ್ಪಾದನೆ ಜಗತ್ತಿನ ಬಹು ದೊಡ್ಡ ಸವಾಲಾಗಿದ್ದು, ಸರ್ಕಾರ ಅಥವಾ  ಸೇನೆ ಯಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ.  ಭಾರತವನ್ನು ಭಯೋತ್ಪಾದನೆ   ಮುಕ್ತವಾಗಿ ಸಲು ಭಜರಂಗ ದಳ `ಶೋಭಾಯಾತ್ರೆ' ಎಂಬ ಅಭಿಯಾನ ನಡೆಸಲಿದೆ ಎಂದು  ವಿಶ್ವ ಹಿಂದೂ ಪರಿಷತ್‍ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ  ಡಾ.ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.

ಶನಿವಾರ ನಗರದ ಸರ್ದಾರ್ ಪಟೇಲ್ ಭವನದಲ್ಲಿ  ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ  ರ್ಯಕಾರಿಣಿ  ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ  ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದೇಶಗಳು ಇವರಿಗೆ ತರಬೇತಿ ನೀಡುತ್ತಿದ್ದು,  ಯೋತ್ಪಾದಕರ ವಿರುದ್ಧ ಶೌರ್ಯ ಪ್ರದರ್ಶನ ಮಾಡಿ ದೇಶವನ್ನು ಭಯೋತ್ಪಾದನೆ  ಮುಕ್ತಗೊಳಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿಹಿಂಪ ವತಿಯಿಂದ ಹಳ್ಳಿ-ಹಳ್ಳಿಗಳಿಗೆ  ಹೋಗಿ ಭಯೋತ್ಪಾದನೆಯ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ತೊಗಾಡಿಯಾ, ದಾದ್ರಿ ಘಟನೆ ಬಳಿಕ  ಹಲವಾರು ಸಾಹಿತಿಗಳು ಪ್ರಶಸ್ತಿ ವಾಪಾಸ್ಸು ಮಾಡಿ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದರು.
ಆದರೆ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಗೆ ಯಾವುದೇ   ಹಿತಿಗಳು ಸ್ಪಂದಿಸಿಲ್ಲ. ಅಸಹಿಷ್ಣುತೆಯನ್ನು ಜಾತಿ ಆಧಾರದಲ್ಲಿ ಪರಿಗಣಿಸಲಾಗುತ್ತಿದೆ. ರಾತ್ರಿ  2ರ ಬಳಿಕ ಗಣೇಶ ಮಂದಿರದಲ್ಲಿ ಮೈಕ್ ನಿಷೇಧಿಸಲಾಗುತ್ತದೆ.

ಆದರೆ, ಮಸೀದಿಗಳಲ್ಲಿ ಬೆಳಗಿನ ಜಾವ ಆಝಾನ್ ಕರೆಗೆ ಏಕೆ ನಿಷೇಧವಿಲ್ಲ, ಇಲ್ಲಿಯೂ  ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಆನಂದ  ರೂಜಿ, ವಿಶ್ವಹಿಂದು ಪರಿಷತ್‍ನ ರಾಷ್ಟ್ರಿಯ  ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್,  ಭಜರಂಗದಳದ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ, ಭಜರಂಗದಳದ ರಾಷ್ಟ್ರಿಯ   ಹ ಸಂಯೋಜಕ ಮನೋಜ್ ಶರ್ಮಾ, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣದ  ಕಾರ್ಯದರ್ಶಿ ಟಿ.ಎ.ಪಿ.ಶೆಣೈ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಷ್ಟ್ರೀಯ  ಕಾರ್ಯಕಾರಣಿ ಸಭೆಯಲ್ಲಿ ಪರಿಷತ್ ನ ಕಾರ್ಯದರ್ಶಿ ಸುರೇಂದ್ರ ಕುಮಾರ್, ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹಾಗೂ ಆನಂದ ಗುರೂಜಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com