ವೃತ್ತಿಪರ ಕೋರ್ಸ್: ಕನ್ನಡ ಕಡ್ಡಾಯಕ್ಕೆ ಶಿಫಾರಸು

ವೃತ್ತಿಪರ ಕೋರ್ಸ್‍ನ ಎಲ್ಲಾ ಬಗೆಯ ವಿವಿಗಳಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯ ಮಾಡಬೇಕು, ಇಂಗ್ಲಿಷ್ ಪಠ್ಯ...
ಬೆಂಗಳೂರಿನಲ್ಲಿ ಶನಿವಾರ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಡಾ.ಹಿ.ಚಿ.ಬೋರಲಿಂಗಯ್ಯ ವರದಿ ಸಲ್ಲಿಸಿದರು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ,
ಬೆಂಗಳೂರಿನಲ್ಲಿ ಶನಿವಾರ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಡಾ.ಹಿ.ಚಿ.ಬೋರಲಿಂಗಯ್ಯ ವರದಿ ಸಲ್ಲಿಸಿದರು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ,

ಬೆಂಗಳೂರು: ವೃತ್ತಿಪರ ಕೋರ್ಸ್‍ನ ಎಲ್ಲಾ ಬಗೆಯ ವಿವಿಗಳಲ್ಲಿ ಕನ್ನಡ ಭಾಷಾ      ಬೋಧನೆಯನ್ನು  ಕಡ್ಡಾಯ ಮಾಡಬೇಕು, ಇಂಗ್ಲಿಷ್ ಪಠ್ಯ ಕಡ್ಡಾಯಗೊಳಿಸಿದಂತೆ ಕನ್ನಡ  
ಭಾಷಾ ಪಠ್ಯವನ್ನು ಸಹ ಕಡ್ಡಾಯಗೊಳಿಸಬೇಕು ಎಂದು ಡಾ.ಹಿ.ಚಿ.ಬೋರಲಿಂಗಯ್ಯ  ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ವೃತ್ತಿ ಶಿಕ್ಷಣದಲ್ಲಿ (ಇಂಜಿನಿಯರಿಂಗ್,  ವೈದ್ಯಕೀಯ, ಕಾನೂನು ಹಾಗೂ ಕೃಷಿ ಇತ್ಯಾದಿ  ವಿಭಾಗಗಳಲ್ಲಿ) ಕಡ್ಡಾಯವಾಗಿ ಕನ್ನಡ ಬೋಧಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ಹಾಗೂ ಶಿಫಾರಸು ನೀಡುವ ಸಂಬಂಧ ರಚಿಸಿದ್ದ ಸಮಿತಿಯು 10 ಪ್ರಮುಖ ಶಿಫಾರಸುಗಳನ್ನು  ಒಳಗೊಂಡ ವರದಿಯನ್ನು ಉನ್ನತ ಶಿಕ್ಷಣ  ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಸಲ್ಲಿಸಿದೆ.

ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಬದಲಾಗಿ ಇತರೆ ಯಾವುದಾದರೂ ಭಾರತೀಯ ಭಾಷೆ  ತೆಗೆದುಕೊಳ್ಳಬಹುದೆಂಬ ಸದ್ಯ ಜಾರಿಯಲ್ಲಿರುವ ಪದ್ದತಿ ಕೈಬಿಡಬೇಕು ಎಂದೂ   ಶಿಫಾರಸು  ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ  ಉಪಸ್ಥಿತರಿದ್ದರು.

ವರದಿ ಸ್ವೀಕರಿಸಿದ ಸಚಿವರು ಸಮಿತಿಯ ಶಿಫಾರಸುಗಳನ್ನು ಉನ್ನತ ಶಿಕ್ಷಣ ಪರಿಷತ್ತಿನ  ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com