ಮುಡಾ ವಿರುದ್ಧ ಹೈಕೋರ್ಟ್ ಗೆ ಅರ್ಜಿ

ನೂತನವಾಗಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಹೇಳಿ ಸಾರ್ವನಿಕರಿಂದ ಹಣ ಸಂಗ್ರಹಿಸಿ ಹಿಂದಿರುಗಿಸದ ಮಂಡ್ಯ ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ನೂತನವಾಗಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಹೇಳಿ ಸಾರ್ವನಿಕರಿಂದ ಹಣ ಸಂಗ್ರಹಿಸಿ ಹಿಂದಿರುಗಿಸದ ಮಂಡ್ಯ ನಗರಾಬಿವೃದ್ಧಿ ಪ್ರಾದಿಕಾರದ ಕ್ರಮವನ್ನು ಪ್ರಶ್ನಿಸಿ ಸತ್ಯಾನಂದ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ಕುಮಾರ್ ಮತ್ತು ಪ್ರದೀಪ್ ಡಿ. ವೈಂಣ್ಕರ್ ಅವರಿದ್ದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಒಂದು ವಾರದ ಕಾಲ ಮುಂದೂಡಿದೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ನೂತನ ಬಡಾವಣೆ ನಿರ್ನಾಣ ಮಾಡುವುದಾಗಿ 2007ರಲ್ಲಿ ತಿಳಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಈ ಸಂದರ್ಭದಲ್ಲಿ ಸುಮಾರು 28 ಸಾವಿರ ಜನರಿಂದ ರು. 1.76 ಕೊಟಿ ಹಣವನ್ನು ಸಂಗ್ರಹಿಸಿತ್ತು. ಆದರೆ, ಬಡಾವಣೆ ನಿರ್ಮಾಣ ಮತ್ತು ನಿವೇಶನಗಳ ಸಂಬಂಧ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅರ್ಜಿದಾರರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com