ಅರ್ಕಾವತಿ ಬಡಾವಣೆ ಭೂ ಹಗರಣ: ಪುನರ್ ಪರಿಷ್ಕೃತ ವರದಿ ಕೆಂಪಣ್ಣ ಆಯೋಗಕ್ಕೆ ಸಲ್ಲಿಕೆ

ಅರ್ಕಾವತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲಿ ಖಾಸಗಿಯವರ ಜೊತೆಗೆ ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಎಂಬ ...
ಅರ್ಕಾವತಿ ಬಡಾವಣೆ
ಅರ್ಕಾವತಿ ಬಡಾವಣೆ

ಬೆಂಗಳೂರು: ಅರ್ಕಾವತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲಿ  ಖಾಸಗಿಯವರ ಜೊತೆಗೆ ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಎಂಬ ಪ್ರಕರಣ ವಿಚಾರವಾಗಿ ದೂರುದಾರರ ಪರ ವಕೀಲರು ಕೆಂಪಣ್ಣ ಆಯೋಗಕ್ಕೆ ತಿಳಿಸಿದರು.

ಬಡಾವಣೆ ನಿರ್ಮಾಣಕ್ಕೆ ಥಣಿ ಸಂದ್ರ ಗ್ರಾಮದ ಒಟ್ಟು 37 ಎಕರೆ 6 ಗುಂಟೆ ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಲಾಗಿದೆ. ಆ ಜಮೀನಿನ ಖಾತೆ ಯಾರ ಹೆಸರಿನಲ್ಲಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಾಟೀ ಸವಾಲಿಗೆ ಹಾಜರಾಗಿದ್ದ ಬಿಡಿಎ ಆಯುಕ್ತ ಶ್ಯಾಂಭಟ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಅದು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅವರ ಹೆಸರಿನಲ್ಲಿದೆ. ಜೊತೆಗೆ ಅದು ಸರ್ಕಾರಿ ಒಡೆತನದ ಭೂಮಿಯಾಗಿದೆ. ಅಲ್ಲದೇ ಕೆಲ ಭಾಗಗಳು ಶ್ರೀನಿವಾಸ ರಾಜು, ಸೀತಾ ಮಾಧವನ್ ಮತ್ತಉ ಥಣಿಸಂದ್ರ ಗೋಪಾಲಯ್ಯ ಅವರ ಹೆಸರುಗಳಿಗೆ ಖಾತೆಯಾಗಿದೆ ಎಂದು ಉತ್ತರಿಸಿದರು.

ಅರ್ಕಾವತಿ ಬಡಾವಣೆಯಲ್ಲಿ ಯಾರ ಹೆಸರಿಗೆ ಡಿನೋಟಿಫಿಕೇಶನ್ ಮಾಡಲಾಗಿದೆ. ನಿವೇಶನ ಪಟ್ಟಿಯ ಪುನರ್ ರಚನೆ, ನಿರಪೇಕ್ಷಣಾ ಪತ್ರಗಳನ್ನು ಯಾರಿಗೆ ನೀಡಲಾಗಿದೆ ಎಂಬ ಪ್ರಶ್ನೆಗೆ ಆಯುಕ್ತರು, ಈ ಕುರಿತುನಮ್ಮ ಬಳಿ ಕೆಲವೇ ದಾಖಲೆಗಳಿವೆ. ಉಳಿದ ದಾಖಲೆಗಳ ಕುರಿತು ಪರಿಶೀಲನೆ ನಡೆಸಬೇಕಿದೆ ಎಂದರು.

ಜೊತೆಗೆ ಅರ್ಕಾವತಿ ಬಡಾವಣೆಯ ಭೂ ಹಗರಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪುನರ್ ಪರಿಷ್ಕೃತ ವರದಿಯನ್ನು ಆಯೋಗಕ್ಕೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com