ಜನರಿಗೆ ಬಿಎಂಟಿಸಿ ಬಸ್ ಪಾಸ್ ಬರೆ

ಬಿಎಂಟಿಸಿ ಮಾಸಿಕ ಪಾಸ್ ದರ 225 ಏರಿಕೆಯಾಗಿದೆ. ಈ ತನಕ ಜಾರಿಯಲ್ಲಿದ್ದ ಕಪ್ಪು ಹಲಗೆ ಹಾಗೂ ಕೆಂಪು ಹಲಗೆ ಬಸ್ ಪಾಸುಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಎಂಟಿಸಿ ಮಾಸಿಕ ಪಾಸ್ ದರ 225 ಏರಿಕೆಯಾಗಿದೆ. ಈ ತನಕ ಜಾರಿಯಲ್ಲಿದ್ದ ಕಪ್ಪು ಹಲಗೆ ಹಾಗೂ ಕೆಂಪು ಹಲಗೆ ಬಸ್ ಪಾಸುಗಳನ್ನು ಬಿಎಂಟಿಸಿ ರದ್ದುಪಡಿಸಿದೆ. ಅವುಗಳ ಬದಲು ಒಂದೇ ಮಾದರಿಯ ಸಾಮಾನ್ಯ ಮಾಸಿಕ ಪಾಸ್ ಜಾರಿಗೊಳಿಸಿ 225 ದರ ಏರಿಕೆ ಮಾಡಿದೆ.

ಈ ಮೂಲಕ ನಗರದ ಬಡ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಆದರೆ, ಕಡಿಮೆ ಸಂಖ್ಯೆಯ ಪ್ರಯಾಣಿಕರು ಬಳಸುತ್ತಿದ್ದ 1300 ರೂಪಾಯಿಯ ಹಸಿರು ಪಾಸುಗಳನ್ನು ರದ್ದುಮಾಡಿ ಅವರಿಗೂ ಸಾಮಾನ್ಯ 1050 ನಿಗದಿ ಮಾಡಿದೆ. ಅಂದರೆ ಇವರಿಗೆ 250 ಕಡಿಮೆಗೊಳಿಸಿ ಗ್ರಾಮೀಣ ಪ್ರಯಾಣಿಕರಿಗೆ ಅನುಕೂಲ ಮಾಡಿರುವಂತೆ ತೋರಿಸಲಾಗಿದೆ.

ಬಿಎಂಟಿಸಿ ಎಲ್ಲ ಮಾದರಿಯ ಪಾಸುಗಳನ್ನು ರದ್ದುಪಡಿಸಿ ಒಂದೇ ಮಾದರಿಯ ಪಾಸು ಜಾರಿಯಿಂದ ಕಪ್ಪು ಹಲಗೆ ಪಾಸುಗಳನ್ನು ಬಳಸುತ್ತಿದ್ದ ಸುಮಾರು 32 ಸಾವಿರ ಪ್ರಯಾಣಿಕರ ಮೇಲೆ ಹೊರೆ ಹೆಚ್ಚಿಸಿದರೆ ಸುಮಾರು 21 ಲಕ್ಷ ಪ್ರಯಾಣಿಕರು ಬಳಸುತ್ತಿದ್ದ ಕೆಂಪು ಹಲಗೆ ಪಾಸುಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಉಳಿದಂತೆ ಕಡಿಮೆ ಜನ ಬಳಸುತ್ತಿದ್ದ ಹಸಿರು ಪಾಸುಗಳ ದರ 250 ರೂಪಾಯಿ ಕಡಿಮೆಗೊಳಿಸಿ ಗ್ರಾಮಾಂತರ ನಗರ ಪ್ರದೇಶಗಳಿಗೆ ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

ವಿವಿಧ ಮಾದರಿಯ ಪಾಸುಗಳಿಂದ ಸಾರ್ವಜನಿಕರು ಹಾಗೂ ನಿರ್ವಾಹಕರು ಗೊಂದಲ ಎದುರಿಸಬೇಕಾಗಿತ್ತು. ಕಪ್ಪು ಹಲಗೆ ಪಾಸುಗಳ ದುರ್ಬಳಕೆ ಹೆಚ್ಚಾಗುವುದರ ಜೊತೆಗೆ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ಕಾರಣದಿಂದ ಕಪ್ಪು ಹಲಗೆ ಪಾಸು ರದ್ದುಪಡಿಸುವುದು ಅನಿವಾರ್ಯವಾಗಿದೆ. ನೂತನ ಪಾಸು ಪದ್ದತಿಯಿಂದ ಸಾರ್ವಜನಿಕರು ಹಾಗೂ ನಿರ್ವಾಹಕರಿಗೆ ಉಪಯೋಗವಾಗಲಿದ್ದು, ಕಪ್ಪು ಹಲಗೆ ಪಾಸುಗಳನ್ನು ಪಡೆಯುತ್ತಿದ್ದವರೂ ನಗರದಾದ್ಯಂತ ಸಂಚರಿಸಬಹುದಾಗಿದೆ.ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ಆಡಳಿತ ಮಂಡಳಿ ಸಭೆ ಈ ನಿರ್ಣಯವನ್ನು ತೆಗೆದುಕೊಂಡಿದೆ ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com