ಕಸಾಪ: ಘಟಾನುಘಟಿಗಳು ಚುನಾವಣಾ ಕಣಕ್ಕೆ

ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ 6 ಅಭ್ಯರ್ಥಿಗಳಿಂದ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಆಂಧ್ರ ಪ್ರದೇಶ ಗಡಿನಾಡು...
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಜಯಪ್ರಕಾಶ್ ಗೌಡ ನಾಮಪತ್ರ ಸಲ್ಲಿಸಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಜಯಪ್ರಕಾಶ್ ಗೌಡ ನಾಮಪತ್ರ ಸಲ್ಲಿಸಿದರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ 6 ಅಭ್ಯರ್ಥಿಗಳಿಂದ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಆಂಧ್ರ ಪ್ರದೇಶ ಗಡಿನಾಡು ಘಟಕಕ್ಕೆ ಇಬ್ಬರು ಉಮೇದುವಾರರಿಂದ ನಾಮಪತ್ರ ಸಲ್ಲಿಕೆಯಾಗಿವೆ.

ನಿವೃತ್ತ ಐಎಎಸ್ ಅಧಿಕಾರಿ ಡಾ. ಮನು ಬಳಿಗಾರ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು, ಕನ್ನಡ ಸೇನೆ ಅಧ್ಯಕ್ಷ ಆರ್.ಎಸ್.ಎನ್.ಗೌಡ, ಮಂಡ್ಯ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ, ಮಾ.ಚಿ.ಕೃಷ್ಣ, ಬಸವರಾಜ ಶಿ. ಹಳ್ಳೂರ ಹಾಗೂ ಗಡಿನಾಡು ಘಟಕವಾದ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಸ್ಥಾನಕ್ಕೆ ಗಿರಿಜಾಪತಿ, ಎಂ.ಬಿ.ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಗಣೇಶ್ ಮೊಕಾಶಿ, ಪಿನಾಕಿ ಪಾಣಿ ಉಮೇದುವಾರಿಕೆ ಸಲ್ಲಿಸಿದರು.

ಈ ಬಾರಿಯ ಕಸಾಪ ಚುನಾವಣೆಯಲ್ಲಿ ಡಾ.ಮನು ಬಳಿಗಾರ್ ಮತ್ತು ಪ್ರೊ.ಜಯಪ್ರಕಾಶ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ರಾಜ್ಯದ 21 ಜಿಲ್ಲೆಗಳಿಂದ 41 ಅಭ್ಯರ್ಥಿಗಳು 64 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 9 ಜಿಲ್ಲೆಗಳಿಂದ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com