ಬೆಂಗಳೂರು: ಅಮೆರಿಕದಲ್ಲಿರುವಂತೆ ಭಾರತದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವ ಪ್ರಾಧಿಕಾರಗಳು ರಚನೆಯಾಗಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹೇಳಿದರು.
ಬೆಂಗಳೂರು ಡೇರಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 51 ನೇ ಡೇರಿ ಡೇ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಆರೋಗ್ಯಕ್ಕಾಗಿ ಹಾಲು ಬಗ್ಗೆ ಅವರು ಮಾತನಾಡಿ, ನಾವು ಆಹಾರ ರೂಪದಲ್ಲಿ ವಿಷ ಸೇವಿಸುತ್ತಿದ್ದೇವೆ. ಆಹಾರದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ತಳಮಟ್ಟದ ಚಿಂತನೆ ಆಗಬೇಕಿದೆ. ಆಹಾರ ವಿಜ್ಞಾನದ ತಂತ್ರಜ್ಞರು ವಿಜ್ಞಾನಿಗಳು ಪರೀಕ್ಷೆ ನಡೆಸುವ ಪ್ರಾಧಿಕಾರಗಳ ಅಗತ್ಯವಿದೆ ಎಂದರು.
ಪ್ರಕೃತಿಯಲ್ಲಿ ಸೂರ್ಯ, ಆಹಾರ, ವ್ಯಾಯಾಮ, ಮರ-ಗಿಡಗಳೆಂಬ ಐವರು ಉತ್ತಮ ವೈದ್ಯರಿದ್ದಾರೆ. ಇಂದು ಸೂರ್ಯ ನೆತ್ತಿಗೆ ಬರುವ ಮುನ್ನವೇ ನಾವು ಬಹುಮಹಡಿ ಕಟ್ಟಡದ ಒಳಗೆ ಸೇರಿಕೊಳ್ಳುತ್ತೇವೆ. ಮುಳುಗಿದ ನಂತರ ಹೊರ ಬರುತ್ತೇವೆ. ಇದರಿಂದ ಶೇ.80 ಜನ ವಿಟಮಿನ್ ಡಿ ಕೊರತೆ ಎದುರಿಸುತ್ತಿದ್ದು, ಪಟ್ಟಣ ನಿವಾಸಿಗಳಲ್ಲಿ ಈ ಕೊರತೆ ಹೆಚ್ಚಾಗಿದೆ. ಯುವಜನರಲ್ಲಿ ಶೇ.60 ರಷ್ಟು ವಿಟಮಿನ್ ಡಿ ಕೊರತೆ ಇದೆ. ಸಾಂಕ್ರಾಮಿಕವಲ್ಲದ ರೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ದೇಶದಲ್ಲಿ ಶೇ.50 ರಷ್ಟು ಸಾವು ಈ ರೋಗಗಳಿಂದಾದರೆ ಶೇ.25 ರಷ್ಟು ಹೃದಯ ಕಾಯಿಲೆಗಳಿಂದ ಆಗುತಿದೆ ಎಂದು ತಿಳಿಸಿದರು.
Advertisement