
ಬೆಂಗಳೂರು: ಗ್ರಾಮಪಂಚಾಯಿತಿ ಚುನಾವಣೆ ನಡೆದು ವರ್ಷ ಕಳೆಯುವಷ್ಟರಲ್ಲೇ ಜಿಪಂ, ತಾಪಂ ಚುನಾವಣೆ ಬಂದಿದ್ದು, ಈಗ ಮತ್ತೊಂದು ಹಂತದ ಹಂತದ ಹಳ್ಳಿ ರಾಜಕೀಯಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಈಗಾಗಲೇ ರಾಜ್ಯ ಚುನಾವಣಾ ಆಯೋಗ ಜಿಪಂ ತಾಪಂ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಜ.25 ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಲಿದೆ. ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಫೆ.1 ಕೊನೆಯ ದಿನವಾಗಿದ್ದು ಫೆ.2 ರಂದು ಪರಿಶೀಲನೆ ನಡೆಯಲಿದೆ. ಫೆ.4 ರ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಫೆ.13 ರಂದು ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ಫೆ.15 ರಂದು ನಡೆಸಿ ಅಂತಿಮವಾಗಿ ಫೆ.23 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಫೆ.24 ರಂದು ಚುನಾವಣಾ ಪ್ರಕ್ರಿಯೆಗೆ ಅಂತಿಮ ಮುದ್ರೆ ಬೀಳಲಿದೆ.
Advertisement