ಭಾರತದ ಐಕ್ಯತೆಗೆ ಸಂಸ್ಕೃತವೇ ಕಾರಣ

ಇಡೀ ಭಾರತವನ್ನು ಒಂದು ಗೂಡಿಸುವುದು ಸಂಸ್ಕೃತ ಮಾತ್ರ. ಇದನ್ನು ಸುಳ್ಳು ಎನ್ನುವವರೊಂದಿಗೆ ಚರ್ಚಿಸುವುದು ವ್ಯರ್ಥ ಎಂದು ಕಾದಂಬರಿಕಾರ...
ಎಸ್ ಎಲ್  ಭೈರಪ್ಪ
ಎಸ್ ಎಲ್ ಭೈರಪ್ಪ
Updated on
ಬೆಂಗಳೂರು: ಇಡೀ ಭಾರತವನ್ನು ಒಂದು ಗೂಡಿಸುವುದು ಸಂಸ್ಕೃತ ಮಾತ್ರ. ಇದನ್ನು ಸುಳ್ಳು ಎನ್ನುವವರೊಂದಿಗೆ ಚರ್ಚಿಸುವುದು ವ್ಯರ್ಥ ಎಂದು ಕಾದಂಬರಿಕಾರ ಸಾಹಿತಿ ಡಾ. ಎಸ್ ಎಲ್  ಭೈರಪ್ಪ ಹೇಳಿದ್ದಾರೆ.
ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಭಾನುವಾರ ರಾಷ್ಟ್ರೋತ್ಥಾನ ಸಾಹಿತ್ಯ ಸಂಸ್ಥೆ 50 ನೇ ವರ್ಷದ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಭಾರತೀಯ ಕ್ಷಾತ್ರ ಪರಂಪರೆ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಭರತನ ನಾಟ್ಯ ಶಾಸ್ತ್ರವನ್ನು ಭಾರತೀಯ ಕಾವ್ಯ ಮೀಮಾಂಸೆ ಎನ್ನಲಾಗುತ್ತಿದೆ. ಆದರೆ ಅದು ಸಂಸ್ಕೃತ ಕಾವ್ಯ ಮೀಮಾಂಸೆ. ಇಡೀ ಭಾರತವನ್ನು ಒಂದುಗೂಡಿಸುವುದು ಈ ಸಂಸ್ಕೃತವೇ. ಇದನ್ನು ಸುಳ್ಳು ಎನ್ನುವುದು ಸರಿಯಲ್ಲ. ಇದು ಸಾಹಿತ್ಯ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ.  ನಾಟ್ಯ ಶಾಸ್ಚ್ರ , ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ  ಎಂದು ಅವರು ಅಭಿಪ್ರಾಯಪಟ್ಟರು. 
ಕ್ಷಾತ್ರ ಧರ್ಮವನ್ನು ಎಲ್ಲಿ  ಹೇಗೆ  ಒಳಗೊಳಿಸಬೇಕೆನ್ನುವಲ್ಲ  ಗೊಂದಲವಿದೆ. ನಮ್ಮ ಮೇಲೆ ದಂಡೆತ್ತಿ ಬಂದೋರಿಗೆ ಈ ಆಲೋಚನೆ ಇರಲಿಲ್ಲ. ಆದರೆ ನಮ್ಮೊಳಗೇ ಇತ್ತು. ನೆಹರೂ ಅಧಿಕಾರಕ್ಕೆ ಬಂದಾಗ  ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ  ಆಜಾದ್ ಅವರನ್ನು ಮಾಡಿದರು. ನಮ್ಮ ಪಠ್ಯ ಪುಸ್ತಕದೊಳಗೆ ನಮ್ಮ ಇತಿಹಾಸವನ್ನು ನೋಡುವಂಥ ಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ವಸ್ತುನಿಷ್ಠವನ್ನಾಗಿ ಮಾಡಿದರು. ಇದು ನಮ್ಮ ಜನರಿಗೆ ಅರ್ಥವಾಗಲಿಲ್ಲ. ಇಂದು ನಾವು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದವೆಂದು ಪ್ರಚಾರ ಮಾಡುತ್ತಿದ್ದೇವೆ. ಇದೆಲ್ಲಾ ಸುಳ್ಳು, ಆಡಳಿತಗಾರರು ಭಾರತೀಯ ಧರ್ಮ, ಸಂಸ್ಕೃತಿಯನ್ನೆಲ್ಲಾ ಒಂದೊಂದಾಗಿ ತಿರುಚಿದರು. ಕಮ್ಯುನಿಷ್ಟರು ಹೇಳಿದ್ದೇ ಸತ್ಯವೆಂಬಂತೆ ನಡೆದರು. ಹಾಗಾಗಿ ದೇಶದಲ್ಲಿ ಡಿಸ್ಕವರಿ ಇನ್ ಇಂಡಿಯಾ 25 ವರ್ಷಗೊಳಗೆ ಡಿಸ್ಕವರಿ ಅವರ್ ಕಂಟ್ರಿಯಾಗಿಎಲ್ಲ ಕ್ಷೇತ್ರವೂ ಉಲ್ಟಾ ತಿರುಗಿದವು ಎಂದರು.
ನಿವೃತ್ತ ಎಸಿಪಿ ಬಿಬಿ ಅಶೋಕ್ ಕುಮಾರ್ ಮಾತನಾಡಿ, ಕನ್ನಡ ಓದುಗರನ್ನು ಹಿಡಿದಿಟ್ಟಿರುವುದೇ ಭೈರಪ್ಪನವರು. ಅವರ ವಂಶವೃಕ್ಷ  ನನ್ನ ಬದುಕಿನ ಬೇರುಗಳನ್ನು ಬಲ ಪಡಿಸಿತು. ನನ್ನೆಲ್ಲಾ ಬೆಳವಣಿಗೆಗೆ ಇವರೇ ಕಾರಣ  ಎಂದರು.
ಸಾಫ್ಟ್‌ವೇರ್ ತಂತ್ರಜ್ಞ ಎಚ್. ಎ. ವಾಸುಕಿ, ಡಾ. ಎಸ್. ಆರ್ ರಾಮಸ್ವಾಮಿ ಮತ್ತು ಲೇಖಕ ಡಾ. ಆರ್. ಗಣೇಶ್ ಇನ್ನಿತರರು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com