ಅಂಗವಿಕಲರಿಗಾಗಿಯೇ ವಿಶೇಷ ಅಂಧರ ಸ್ನೇಹಿ ಬೋಗಿ ಮೈಸೂರಲ್ಲಿ ಅರ್ಪಣೆ

ನೈಋತ್ಯ ಮೈಸೂರು ವಿಭಾಗ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ದೃಷ್ಟಿ ದೋಷ ಉಳ್ಳವರ ಸ್ನೇಹಿ ಬೋಗಿಗೆ ಚಾಲನೆ ನೀಡಿದೆ. ..
ಅಂಧರ ವಿಶೇಷ ಬೋಗಿಗೆ ಚಾಲನೆ
ಅಂಧರ ವಿಶೇಷ ಬೋಗಿಗೆ ಚಾಲನೆ

ಮೈಸೂರು: ನೈಋತ್ಯ ಮೈಸೂರು ವಿಭಾಗ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ದೃಷ್ಟಿ ದೋಷ ಉಳ್ಳವರ ಸ್ನೇಹಿ ಬೋಗಿಗೆ ಚಾಲನೆ ನೀಡಿದೆ.

ಮೈಸೂರು-ವಾರಾಣಸಿ ರೈಲಿನಲ್ಲಿ ಪ್ರಯಾಣಿಸುವ ಅಂಧರು ಇನ್ನು ಸೀಟ್ ನಂಬರ್, ಶೌಚಗೃಹ, ಬಾಗಿಲು ಮುಂತಾದವುಗಳನ್ನು ಹುಡುಕಲು ಪರದಾಡಬೇಕಿಲ್ಲ. ಯಾಕೆಂದರೆ ಅಂಧರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ರೈಲಿನ ಒಳಭಾಗದಲ್ಲಿ ಅಗತ್ಯ ಮಾಹಿತಿಯುಳ್ಳ ಬ್ರೈಲ್ ಲಿಪಿಯ ಫಲಕಗಳನ್ನು ಪ್ರಾಯೊಗಿಕವಾಗಿ ಅಳವಡಿಸಲಾಗಿದೆ.

ರೈಲ್ವೆ ವಿಭಾಗದ ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸೋಮವಾರ ದೃಷ್ಟಿದೋಷವುಳ್ಳವರ ಸ್ನೇಹಿ ರೈಲು ವ್ಯವಸ್ಥೆಗೆ ಚಾಲನೆ ನೀಡಲಾಯಿತು. ದೇಶದ ಪ್ರಥಮ ‘ದೃಷ್ಟಿದೋಷವುಳ್ಳವರ ಸ್ನೇಹಿ ರೈಲು’ ಎಂಬ ಕೀರ್ತಿ ಮೈಸೂರು-ವಾರಾಣಸಿ ರೈಲಿಗೆ ಪ್ರಾಪ್ತವಾಗಿದೆ.

ದೃಷ್ಟಿದೋಷವಿದ್ದವರು ಮೈಸೂರು-ವಾರಾಣಸಿ ರೈಲು ಏರುತ್ತಿದ್ದಂತೆಯೇ ಸೀಟ್ ನಂಬರ್​ಗಳ ಪಕ್ಕದಲ್ಲೇ ಬ್ರೈಲ್  ಲಿಪಿಯ ಫಲಕಗಳು ಕಾಣುತ್ತವೆ. ಅಂಧರು ಯಾರ ಸಹಾಯವೂ ಇಲ್ಲದೆ ಬ್ರೈಲ್ ಲಿಪಿಯ ಫಲಕಗಳನ್ನು ರ್ಸ³ಸಿ ತಮ್ಮ ಸೀಟ್ ಹುಡುಕಿಕೊಳ್ಳಬಹುದು. ಸೀಟ್ ನಂಬರ್ ಜತೆಗೆ ಅಲರ್ಟ್ ಚೈನ್, ಶೌಚಗೃಹ, ಬಾಗಿಲು ಎಲ್ಲಿದೆ ಎಂಬುದರ ಮಾಹಿತಿಯನ್ನೂ ಒಳಗೊಂಡ ಬ್ರೈಲ್  ಲಿಪಿಯ ಫಲಕಗಳನ್ನು ಹಾಕಿರುವುದು ಅಂಧರಿಗೆ ನೆರವಾಗಲಿದೆ.

ರೈಲಿನ ಒಳಭಾಗದಲ್ಲಿ ಇಂಥ ಸೌಲಭ್ಯವಿದ್ದರೂ ಹೊರಭಾಗದಲ್ಲಿ ಯಾವುದೇ ಫಲಕ ಅಳವಡಿಸಿಲ್ಲ. ಹೀಗಾಗಿ ಬೋಗಿ ಸಂಖ್ಯೆ ಗುರುತಿಸುವುದು ಕಷ್ಟವಾಗುತ್ತಿದೆ ಎಂಬ ದೂರು ಮೊದಲ ದಿನವೇ ಅಂಧರಿಂದ ಕೇಳಿಬಂತು.

ಸ್ಮಾರ್ಟ್​ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಯಂತ್ರದೊಂದಿಗೆ ಇದೀಗ ನೋಟು ನೀಡಿ ಟಿಕೆಟ್ ಪಡೆಯುವ ಸ್ವಯಂಚಾಲಿತ ಯಂತ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ. ಟಿಕೆಟ್ ಕೌಂಟರ್ ಬಲಭಾಗದಲ್ಲಿ ಅಳವಡಿಸಲಾಗಿರುವ ಯಂತ್ರದ ಸ್ಕ್ರೀನ್​ನಲ್ಲಿ ಮೈಸೂರಿನಿಂದ ಎಲ್ಲಿಗೆ ತೆರಳಬೇಕೆಂಬುದನ್ನು ನಕ್ಷೆಯಲ್ಲಿ ಗುರುತಿಸಬೇಕು. ಕೂಡಲೇ ಪ್ರಯಾಣ ದರ ಸ್ಕ್ರೀನ್​ನಲ್ಲಿ ಕಾಣಲಿದೆ. ನಿಗದಿತ ಸ್ಥಳದಲ್ಲಿ ಹಣದ ನೋಟು ಹಾಗೂ ಚಿಲ್ಲರೆಯನ್ನು ಇಟ್ಟರೆ ಸ್ವೀಕರಿಸಲಿರುವ ಯಂತ್ರವು ಟಿಕೆಟ್ ನೀಡಲಿದೆ.  ರೈಲ್ವೆ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಕುಡಿಯಲು ಶುದ್ಧ ನೀರು ಪೂರೈಸುವ ಯಂತ್ರವನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಿದ್ದು, ನಿಲ್ದಾಣಗಳ ಅಂಗಡಿಗಳಲ್ಲಿ ದೊರೆಯುವ ನೀರಿನ ಬಾಟಲಿಗಳ ಅರ್ಧದಷ್ಟು ಬೆಲೆಗೆ ಈ ಯಂತ್ರ ನೀರು ನೀಡಲಿದೆ. 300 ಮಿಲಿ ಲೀಟರ್​ಗೆ 2 ರೂ., 500 ಮಿ.ಲೀ.ಗೆ 5 ರೂ., 1 ಲೀ.ಗೆ 8 ರೂ., 2 ಲೀ.ಗೆ 12 ರೂ. ಹಾಗೂ 5 ಲೀ.ಗೆ 25 ರೂ. ನೀಡಿ ನೀರು ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com