ಯಥಾ ಪ್ರಜಾ ತಥಾ ರಾಜ ಪರಿಸ್ಥಿತಿ ಇಂದಿನದ್ದು: ವಾಲಾ

ಈ ಹಿಂದೆ ಯಥಾ ರಾಜ ತಥಾ ಪ್ರಜಾ ಎಂಬ ಸ್ಥಿತಿಯಿತ್ತು. ಆದರೆ ಇಂದು ಯಥಾ ಪ್ರಜಾ ತಥಾ ರಜಾ , ಎಂಬ ಸ್ಥಿತಿಯಿದ್ದು, ಪ್ರಜೆಗಳು ಹೇಗಿರುತ್ತಾರೋ ಪ್ರಜಾನಾಯಕ...
ವಿ.ಆರ್ ವಾಲಾ
ವಿ.ಆರ್ ವಾಲಾ

ಬೆಂಗಳೂರು: ಈ ಹಿಂದೆ ಯಥಾ ರಾಜ ತಥಾ ಪ್ರಜಾ ಎಂಬ ಸ್ಥಿತಿಯಿತ್ತು. ಆದರೆ ಇಂದು ಯಥಾ ಪ್ರಜಾ ತಥಾ ರಜಾ , ಎಂಬ ಸ್ಥಿತಿಯಿದ್ದು, ಪ್ರಜೆಗಳು ಹೇಗಿರುತ್ತಾರೋ ಪ್ರಜಾನಾಯಕ ಅದೇ ರೀತಿ ಇರುತ್ತಾನೆ. ಹೀಗಾಗಿ ಯುವಕರು ಜವಾಬ್ದಾರಿಯುತವಾಗಿ ಮತ ಚಲಾವಣೆ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ದೇಶದಲ್ಲಿ ಚುನಾವಣಾ ಆಯೋಗ ಸ್ಥಾಪನೆಯಾಗಿ 66 ವರ್ಷ ಕಳೆದರೂ ಇದುವರೆಗೂ ಒಮ್ಮೆಯೂ ದೇಶದಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಿಲ್ಲ. ಎಂದು ರಾಜ್ಯ ಪಾಲ ವಿ.ಆರ್ ವಾಲಾ ಬೇಸರ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಸೋಮವಾರ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೇ ದೇಶದ ಪ್ರತಿಯೊಬ್ಬ ನಾಗರಿಕನೂ ಮತ ಚಲಾಯಿಸಬೇಕು.

ಈ ವರೆಗೆ ದೇಶದಲ್ಲಿ ಶೇ. 70 ರಿಂದ 75 ರವರೆಗೆ ಮಾತ್ರ ಮತದಾನವಾಗಿದ್ದು, ಉಳಿದ ಶೇ, 25 ರಷ್ಟು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ದೇಶದ ಪ್ರಗತಿ ಯುವಕರ ಕೈಯ್ಯಲ್ಲಿದ್ದು ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ದೇಶವನ್ನು ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡೊಯ್ಯಬೇಕು. ಚುನಾವಣೆ ದಿನ ಎಲ್ಲಿದ್ದರೂ ತಮ್ಮ ಕ್ಷೇತ್ರಕ್ಕೆ ಹೋಗಿ ಮತದಾನ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com