ಪೇಪರ್ ಪ್ಲೇಟ್ ನಲ್ಲಿ ಅಂಬೇಡ್ಕರ್ ಚಿತ್ರ

ಡಾ. ಅಂಬೇಡ್ಕರ್ ಹೆಸರಿಗೆ ಒಂದಲ್ಲೊಂದು ರೀತಿಯಲ್ಲಿ ಪದೇಪದೆ ಮಸಿ ಬಳಿಯಲಾಗುತ್ತಿದೆ. ನಗರದಲ್ಲೂ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು...
ಅಂಬೇಡ್ಕರ್ ಭಾವಚಿತ್ರವಿರುವ ಪೇಪರ್ ಪ್ಲೇಟ್
ಅಂಬೇಡ್ಕರ್ ಭಾವಚಿತ್ರವಿರುವ ಪೇಪರ್ ಪ್ಲೇಟ್

ಚಳ್ಳಕೆರೆ: ಡಾ. ಅಂಬೇಡ್ಕರ್  ಹೆಸರಿಗೆ ಒಂದಲ್ಲೊಂದು ರೀತಿಯಲ್ಲಿ ಪದೇಪದೆ ಮಸಿ ಬಳಿಯಲಾಗುತ್ತಿದೆ.  ನಗರದಲ್ಲೂ  ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಸಂಘಟನೆಗಳ ಮುಖಂಡರು ಮಂಗಳವಾರ ಅಂಗಡಿಯೊಂದಕ್ಕೆ ಬೀಗಮುದ್ರೆ ಜಡಿಸಿದ್ದಾರೆ.

ನಗರಸಭೆ ಆಡಳಿತ ಮಂಡಳಿ ಧ್ವಜಾರೋಹಣ ನೆರವೇರಿಸಿದ ಬಳಿಕ ಆಹ್ವಾನದ ಮೇರೆಗೆ ಶಾಸಕ ಟಿ, ರಘುಮೂರ್ತಿ ಹಾಗೂ ತಹಶಿಲ್ದಾರ್ ಎಸ್ ಪಂಡಿತ್ ಉಪಹಾರಕ್ಕೆ ಆಗಮಿಸಿದ್ದರು.  ಉಪಹಾರ ವಿತರಣೆ ಮಾಡಿದ ಪೇಪರ್ ಪ್ಲೇಟ್ ಗಳಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವಿತ್ತು. ತಿಂಡಿ ತಿಂದು ಬಿಸಾಡುವ ಪ್ಲೇಟಿನಲ್ಲಿ ಡಾ. ಅಂಬೇಡ್ಕರ್  ಭಾವಚಿತ್ರ ಇರುವುದನ್ನು ನಗರ ಸಭಾ ಸದಸ್ಯ ಟಿ.ಜೆ ವೆಂಕಟೇಶ್ ಗಮನಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಅಂಬೇಡ್ಕರ್ ಭಾವಚಿತ್ರ ವಿರುವ ಉಪಾಹಾರದ ಪ್ಲೇಟ್ ಮಾರುತ್ತಿರುವ ವ್ಯಾಪಾರಿಗಳು ಹಾಗೂ ತಯಾರಿಕಾ ಘಟಕದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಹಾಗೂ ಪೌರಾಯುಕ್ತರಿಗೆ ನಗರಸಭೆ ಅಧ್ಯಕ್ಷರು, ಸದಸ್ಯರು, ದಲಿತ ಮುಖಂಡರು ಮನವಿ ಸಲ್ಲಿಸಿದರು. ಶಾಸಕ ಟಿ. ರಘುಮೂರ್ತಿ, ತಹಸೀಲ್ದಾರ್ ಶ್ರೀಧರ್​ಮೂರ್ತಿ ಜನಪ್ರತಿನಿಧಿಗಳು ತಾಲೂಕು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ವೇದಿಕೆಗೆ ಹೋಗುವ ಮುನ್ನ ನಗರಸಭೆಗೆ ಉಪಹಾರಕ್ಕೆ ತೆರಳಿದ್ದಾರೆ. ಅಲ್ಲಿ ತಂದಿದ್ದ ಪೇಪರ್ ಪ್ಲೇಟ್​ಗಳಲ್ಲಿ ಅಂಬೇಡ್ಕರ್, ಮೋದಿ ಮತ್ತಿತರ ರಾಷ್ಟ್ರನಾಯಕರ ಭಾವಚಿತ್ರ ಇದ್ದವು. ಇವುಗಳನ್ನು ಕಂಡ ವಿತರಕರು ಅಧಿಕಾರಿಗಳಿಗೆ ಕೊಡದೆ ಮರೆಮಾಚಿದ್ದಾರೆ. ಕೂಡಲೇ ರಾಷ್ಟ್ರನಾಯಕರ ಭಾವಚಿತ್ರವಿರುವ ಪ್ಲೇಟ್ ಮಾರಾಟ ಮತ್ತು ತಯಾರು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com