ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಬೆಂಗಳೂರು ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ಸಂಜೆ ವಿಧಾನಸೌಧದ ಮುಂಭಾಗ ಚಾಲನೆ ಸಿಗಲಿದೆ...
ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೆ ಆಹ್ವಾನ
ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೆ ಆಹ್ವಾನ

ಬೆಂಗಳೂರು: ಬೆಂಗಳೂರು ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ಸಂಜೆ ವಿಧಾನಸೌಧದ ಮುಂಭಾಗ ಚಾಲನೆ ಸಿಗಲಿದೆ. ವಿಧಾನ ಸೌಧದ ಮುಂಭಾಗ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಹಿರಿಯ ನಟಿ ಜಯಾ ಬಚ್ಚನ್ ಉದ್ಘಾಟನೆ ಮಾಡಲಿದ್ದಾರೆ.

ಆದರೆ ಚಿತ್ರೋತ್ಸವಕ್ಕೆ ಸಂಬಂಧ ಪಟ್ಟ ತಯಾರಿಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ
ಚಿತ್ರರಂಗ­ದ ಯುವ ತಂತ್ರಜ್ಞರು, ಸೃಜನಶೀಲ ಸಿನಿಮಾ ನಿರ್ಮಾಪಕರು, ವಿದ್ಯಾರ್ಥಿಗಳು, ಸದಭಿರುಚಿಯ ಸಿನಿಮಾಸಕ್ತರು ಉತ್ಸವದ ಭಾಗವಾಗಲು ಕಾಯುತ್ತಿದ್ದಾರೆ.

ಕೇವಲ ಗಲ್ಲಾ­ಪೆಟ್ಟಿಗೆ­ಯಲ್ಲಿ ಗೆದ್ದ ಚಿತ್ರಗಳ ಪ್ರದ­ರ್ಶನ­ಕ್ಕಿಂತ ವಿವಿಧ ದೇಶ­ಗಳ ಮತ್ತು ಭಾರತೀಯ ವಿಶಿಷ್ಟ ಚಿತ್ರಗಳನ್ನು ಪ್ರದರ್ಶಿಸುವುದು ಸಿನಿಮೋತ್ಸವದ ವಿಶೇಷ. ಕಥನ ನಿರ್ವಹ­ಣೆಯ ದೃಷ್ಟಿ­ಯಲ್ಲಿ ಹೊಸ ಜಗತ್ತು ಮತ್ತು ಹೊಸ ತಾಂತ್ರಿಕ ಸಾಧ್ಯತೆಯನ್ನು ತೋರಿ­ಸುವ ಪ್ರಯೋಗಶೀಲ ಸಿನಿಮಾಗಳು  ಪ್ರದರ್ಶನ­ವಾಗು­ತ್ತಿದ್ದು, ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುವಂತಿದೆ.

ಫೆ. 4ರವರೆಗೆ ನಡೆಯುವ ಉತ್ಸವದಲ್ಲಿ 45 ದೇಶಗಳ 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಒಟ್ಟು 15 ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಆಯೋಜಿಸಲಾಗಿದೆ. ರಸೂಲ್  ಫೂಕುಟ್ಟಿ, ಅನಿಲ್ ಮೆಹ್ತಾ, ಸುಹಾಸಿನಿ ಮಣಿರತ್ನಂ ಮತ್ತಿತರರು ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಕನ್ನಡದ ‘ತಿಥಿ’ ಸಿನಿಮಾ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿದೆ.

ಒಟ್ಟು ನಾಲ್ಕು ಸಾವಿರ ಪ್ರತಿನಿಧಿಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಿಂದೆಲ್ಲ ಲಿಡೊ ಮಾಲ್‌, ಫನ್ ಸಿನಿಮಾಸ್‌, ವಾರ್ತಾ ಭವನ ಮತ್ತು ಚಲನಚಿತ್ರ ಅಕಾಡೆಮಿಯ ‘ಬಾದಾಮಿ ಹೌಸ್’ನಲ್ಲಿ ಪ್ರದರ್ಶನಗಳು ಇರುತ್ತಿದ್ದವು.

ಆದರೆ ಈ ಬಾರಿ ರಾಜಾಜಿನಗರದ ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನವಿರುವುದು ವಿಶೇಷ. ಒರಾಯನ್ ಮಾಲ್‌ನಲ್ಲಿ ಸಿನಿಮೋತ್ಸವ ಸಂಘಟಿಸಿದ್ದರಿಂದ ವಾಹನ ನಿಲುಗಡೆ ಶುಲ್ಕ ಕುರಿತು ಅಸಮಾಧಾನದ ದನಿ ಕೇಳಿಬಂದಿತ್ತು. ಆದರೆ ಅದಕ್ಕೆ ಈಗ ಪರಿಹಾರ ಕಲ್ಪಿಸಲಾಗಿದ್ದು, ದಿನವಿಡೀ ಕಾರುಗಳ ಪಾರ್ಕಿಂಗ್‌ಗೆ 60, ದ್ವಿಚಕ್ರವಾಹನಗಳ ನಿಲುಗಡೆಗೆ 30 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ.

ಶಬ್ದಗ್ರಹಣ, ನಿರ್ದೇಶನ, ಸಂಭಾಷಣೆ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ಸಂಕಿರಣ ಸಂಘಟಿಸಲಾಗಿದೆ. ಕಳೆದ ಬಾರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬಯಲು ಸಿನಿಮೋತ್ಸವ ನಡೆಸಲಾಗಿತ್ತು. ಆದರೆ,  ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ ಕಾರಣ ಈ ಸಲ ಅದನ್ನು ಕೈಬಿಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ   ಎಸ್‌.ವಿ. ರಾಜೇಂದ್ರಸಿಂಗ್ ಬಾಬು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com