ಧರ್ಮಗಳ ನಡುವೆ ಸಾಮರಸ್ಯ ಬೆಸೆದ ದೋಣಿಗಳ ಸೇತುಬಂಧ!

ನದಿ ಮಧ್ಯ ಭಾಗದಲ್ಲಿ ದ್ವೀಪದಂತಿರುವ ನಡುಪಌಯಲ್ಲಿ ಉರುಸ್ ಕಾರ್ಯಕ್ರಮ. ನದಿ ದಾಟಲು ಸೇತುವೆಯೇ ಇಲ್ಲ...
ತಾತ್ಕಾಲಿಕ ಸೇತುವೆ
ತಾತ್ಕಾಲಿಕ ಸೇತುವೆ

ಬಂಟ್ವಾಳ: ನದಿ ಮಧ್ಯ ಭಾಗದಲ್ಲಿ ದ್ವೀಪದಂತಿರುವ ನಡುಪಳ್ಳಿಯಲ್ಲಿ ಉರುಸ್ ಕಾರ್ಯಕ್ರಮ. ನದಿ ದಾಟಲು ಸೇತುವೆಯೇ ಇಲ್ಲ. ಧರ್ಮ ಭೇದ ಮರೆತ ಊರಿನವರು ದೋಣಿಗಳನ್ನೇ ಸಾಲಾಗಿ ನಿಲ್ಲಿಸಿ ತಾತ್ಕಾಲಿಕ ಸೇತುವೆಯನ್ನಾಗಿ ಮಾಡಿದರು. ಕೋಮು ಸಾಮರಸ್ಯಕ್ಕೆ ನಾಂದಿ ಹಾಡಿದರು.
ಇದೆಲ್ಲ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ರಾಷ್ಟ್ರೀಯ ಹೆದ್ದಾರಿ-75 ಹಾದುಹೋಗುವ ಅದ್ಯಾರು ಕಣ್ಣೂರಿನ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ಬದ್ರಿಯಾ ಜುಮಾ ಮಸೀದಿ ಇದೆ. ಮಸೀದಿ ತಲುಪಲು ಸೇತುವೆ ಸಂಪಾರ್ಕ ಇಲ್ಲ. ಈ ಮಸೀದಿಯ ದರ್ಗಾದಲ್ಲಿ ನಡೆಯುತ್ತಿರುವ ಉರುಸ್ ಗೆ ಸಾವಿರರಾರು ಮಂದಿ ಆಗಮಿಸುತ್ತಾರೆ. ಸೇತುವೆ ಇಲ್ಲದ ಕಾರಣ ಇನೋಳಿಯಿಂದ ಹತ್ತಾರು ಕಿ,ಮಿ ಸುತ್ತು ಬಳಸಬೇಕು ಆದರೆ ಅಡ್ಯಾರಿನಿಂದ ತೆರಳಲು ಇರುವ ಅಂತರ ಕೇವಲ ನೂರು ಮೀಟರ್. ಈ ಪ್ರದೇಶದಲ್ಲಿ ನದಿಯ ಆಳ ಹೆಚ್ಚಿದೆ. ಇದಕ್ಕೆ ಸ್ಥಳೀಯರು ಕಂಡುಕೊಂಡ ಮಾರ್ಗವೇ ದೋಣಿ ಸೇತುವೆ.
ಹಿಂದೂ- ಮುಸ್ಲಿಂ ಎರಡೂ ಸಮುದಾಯಗಳ ಜನರು ಸುಮಾರು 64 ದೋಣಿಗಳನ್ನು ಸಾಲಾಗಿ ಅಡ್ಡಲಾಗಿ ನಿಲ್ಲಿಸಿದರು. ನಂತರ ಅದರ ಮೇಲೆ ಹಲಗೆಗಳನ್ನು ಹಾಕಲಾಗಿದ್ದು ಎರಡೂ ದಡಗಳಲ್ಲಿ ಮರಳ ಚೀಲವನ್ನು ದೋಣಿಯ ಅಂಚಿಗೆ ಜೋಡಿಸಲಾಗಿದೆ. ಈ ತಾತ್ಕಾಲಿಕ ಸೇತುವೆ ಮೂಲಕ ಸಾವಿರಾರು ಮಂದಿ ಉರುಸ್ ಗೆ ಆಗಮಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com