ವಿಜಯಪುರ: ಪ್ರತಿಯೊಂದಕ್ಕೂ ಪಾಶ್ಚಿಮಾತ್ಯರ ಮೇಲೆ ಅವಲಂಬಿತರಾಗಿದ್ದು, ನಮ್ಮ ದೇಶದ ಸಂಸ್ಕೃತಿ ಮತ್ತು ಸಾಧನೆಗಳ ಬಗ್ಗೆ ನಾವು ತಿಳಿದುಕೊಳ್ಳದೆ ಮೌಢ್ಯರಾಗಿದ್ದೇವೆ ಎಂದು ಇತಿಹಾಸ ಪ್ರಾಧ್ಯಾಪಕ ವಿನೋದ್ ಕುಮಾರ್ ತಿಳಿಸಿದರು. ಅವರು ಇಲ್ಲಿನ ರೋಟರಿ ಕ್ಲಬ್ನ ಸಭೆಯಲ್ಲಿ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆ ಕುರಿತು ಉಪನ್ಯಾಸ ನೀಡುತ್ತಿದ್ದರು. ಒಂದು ಸಾವಿರ ವರ್ಷಗಳ ಹಿಂದೆಯೇ ತುಕ್ಕು ಹಿಡಿಯದ ಕಬ್ಬಿಣವನ್ನು ತಯಾರು ಮಾಡಿ ಉಪಯೋಗಿಸಿರುವುದು ನಮಗೆಲ್ಲಾ ತಿಳಿದಿದೆ. ಸಿಂಧೂ ನಗರ ಸಂಸ್ಕೃತಿ ತಾಮ್ರ ಸಂಸ್ಕೃತಿ ಎಂದರು.