ಪೇದೆ ಆನಂದ್ಕುಮಾರ್ ನ್ಯಾಯಾಂಗ ಬಂಧನಕ್ಕೆ

Updated on: 

ಬೆಂಗಳೂರು: ರಾಜಾನುಕುಂಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಆರೋಪಿ ಪೊಲೀಸ್ ಪೇದೆ ಆನಂದ್ಕುಮಾರ್ ಪೊಲೀಸ್ ಬಂಧನದ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಗತ್ಯಬಿದ್ದಲ್ಲಿ ಮತ್ತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಸಹಾಯಕ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಬಿಪಿನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
ಆರೋಪಿ ಆನಂದ್ ಮುಂಗೋಪಿಯಾಗಿರುವುದೇ ಈ ಘಟನೆಗೆ ಪ್ರಮಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೊಲೀಸ್ ಕೈಪಿಡಿ ಪ್ರಕಾರ ರಾತ್ರಿ ಕರ್ತವ್ಯ ನಿರ್ವಹಿಸಿದರೆ ಹಗಲು ರಜೆ ಇಲ್ಲವೇ ಹಗಲು ಕರ್ತವ್ಯ ನಿರ್ವಹಿಸಿದರೆ ರಾತ್ರಿ ರಜೆ ನೀಡಬೇಕು. ಒಬ್ಬ ಸಿಬ್ಬಂದಿ ಇಂತಿಷ್ಟು ಅವಧಿ ಕೆಲಸ ಮಾಡಬೇಕು ಎಂದು ಕೈಪಿಡಿಯಲ್ಲಿ ತಿಳಿಸಲಾಗಿದೆ.
ಆದರೆ, ಪಿಎಸ್ಐ ವಿಜಯ್ಕುಮಾರ್ ಅದಕ್ಕೆ ತದ್ವಿರುದ್ಧವಾಗಿ ಸಿಬ್ಬಂದಿಯನ್ನು ನಡೆಸಿಕೊಳ್ಳುತ್ತಿದ್ದರು. ರಜೆ ನೀಡುತ್ತಿರಲಿಲ್ಲ ಹೆಚ್ಚು ದುಡಿಸುತ್ತಿದ್ದರು. ಅವರೊಂದಿಗೆ ಮಾತನಾಡಲು ಹೋದರೆ ಅಶ್ಲೀಲ ಪದ ಬಳಸಿ ನಿಂದಿಸಿ ಕಳುಹಿಸುತ್ತಿದ್ದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ತಾನು ತಪ್ಪು ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಎಲ್ಲಿಯೂ ಒಪ್ಪಿಕೊಂಡಿಲ್ಲ. ಪಿಎಸ್ಐ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಈ ರೀತಿ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಬಿಪಿನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com