ಚನ್ನಪಟ್ಟಣ: ನವವಿವಾಹಿತ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಕೋಟೆ ಮಠದ ಬೀದಿಯಲ್ಲಿ ನಡೆದಿದೆ.
ವಿಜಯಕುಮಾರ್ (24) ಮೃತಪಟ್ಟವನಾಗಿದ್ದು, ಎಚ್ಡಿಎಫ್ಸಿ ಬ್ಯಾಂಕಿನ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ. 7 ತಿಂಗಳ ಹಿಂದೆ ವಿವಾಹವಾಗಿದ್ದರು. ಪತಿ- ಪತ್ನಿ ನಡುವೆ ಸಾಮರಸ್ಯದ ಕೊರತೆಯಿಂದಾಗಿ ಆತನ ಪತ್ನಿ ತವರು ಮನೆ ಸೇರಿದ್ದರು.
ಇದರಿಂದ ಮನನೊಂದ ವಿಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.