ಮಾಗಡಿ: ಕಲ್ಯ ಬರೀ ಬೆಟ್ಟವೆಂದು ಕಡೆಗಣಿಸಬೇಡಿ, ಬೌದ್ಧ, ಜೈನ, ಶೈವ, ವೈಷ್ಣವರ ಪವಿತ್ರ ಸ್ಥಳವಾಗಿ ಮೆರೆದಿತ್ತು ಎಂದು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ ನುಡಿದರು.
ಅವರು ತಾಲೂಕಿನ ಕಲ್ಯಾ ಗ್ರಾಮದಲ್ಲಿ ಬೆಂಗಳೂರಿನ ಸರ್ಕಾರಿ ಆರ್.ಸಿ. ವಾಣಿಜ್ಯ ಕಾಲೇಜು ಮತ್ತು ನಿರ್ವಹಣಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್ ತಿಳಿಸಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ಎನ್ಎಸ್ಎಸ್ ಧ್ವಜ ಸ್ವೀಕಾರ ಮಾಡಿದರು. ಶಿಬಿರಾಧಿಕಾರಿ ಕೆ. ಜಯಲಕ್ಷ್ಮೀ, ಶಿಕ್ಷಕ ಚಿಕ್ಕವೀರಯ್ಯ, ಡಾ. ಕುಬೇರನಾಯಕ್, ರವಿಕುಮಾರ್, ಸುರೇಶ್, ಶಿಬಿರದ ತಂಡದ ನಾಯಕ ಟಿ.ಎಚ್. ವೆಂಕಟೇಶ್, ಎಂ.ದೀಪಕ್, ಚಂದರಾಜು, ಕೃಷ್ಣ ಸಿ.ರೊಲ್ಲಿ, ಎಸ್.ಗೋಪಿ, ಹನುಮಂತರಾಯಶೆಟ್ಟಿ, ರೇವಣ್ಣ ಸಿದ್ದಪ್ಪ, ಟಿ.ಚೈತನ್ಯ, ಅರ್ಚನಾ, ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.