ಮೈಸೂರು: ಬೆಂಗಳೂರು ಸಮೀಪದ ಹಾರೋಹಳ್ಳಿಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಹಾಗೂ ಪ್ರಕರಣದ ತ್ವರಿತ ತನಿಖೆಗೆ ಆಗ್ರಹಿಸಿ ರಂಗಭೂಮಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಸೋಮವಾರ ಸಂಜೆ ಕಲಾಮಂದಿರ ಆವರಣದಲ್ಲಿ ಮೇಣದಬತ್ತಿಯೊಂದಿಗೆ ಪ್ರತಿಭಟಿಸಿದರು. ಅತ್ಯಾಚಾರಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಅತ್ಯಾಚಾರಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು. ರಂಗಕರ್ಮಿ ಮೈಮ್ ರಮೇಶ್ ನೇತೃತ್ವ ವಹಿಸಿದ್ದರು.