ರಾಮನಗರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ವನಕಲ್ಲು ಮಲ್ಲೇಶ್ವರ ಮಹಾ ಸುಕ್ಷೇತ್ರ ಮಠದಿಂದ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನವನ್ನು ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರ ಮಠದಲ್ಲಿ ಏರ್ಪಡಿಸಲಾಗಿದೆ.
ಆಸಕ್ತರು ತಮ್ಮ ಇತ್ತೀಚಿನ ಎರಡು ಕವನಗಳನ್ನು ಡಿಡಿಪಿ ಮಾಡಿಸಿ, ಸಂಪೂರ್ಣ ವಿಳಾಸ, ಮೊಬೈಲ್ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಫೆ.5ರೊಳಗಾಗಿ ಕಳುಹಿಸಬೇಕು. ಪ್ರತಿ ಕವನವು 16 ಸಾಲುಗಳನ್ನು ಮೀರಿರಬಾರದು. ಕವನಗಳನ್ನು ಶ್ರೀ ಬಸವರಮಾನಂದ ಸ್ವಾಮೀಜಿ, ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರ, ಹೆಗ್ಗುಂದ ಅಂಚೆ, ಸೋಂಪುರ ಹೋಬಳಿ ದಾಬಸ್ಪೇಟೆ ಮಾರ್ಗ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562111 ಈ ವಿಳಾಸಕ್ಕೆ ಕಳಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9663882688 ಅಥವಾ 9663884144 ಸಂಪರ್ಕಿಸಬಹುದು.