ಸೂಲಿಬೆಲೆ: ಇಲ್ಲಿಗೆ ಸಮೀಪದ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಬಲ್ಲಿ ಬುಧವಾರ ಹುತಾತ್ಮರ ದಿನಾಚರಣೆಯನ್ನು ಆಚರಿಸಿಲಾಯಿತು.
ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸ್ಕೌಟ್ ಮತ್ತು ಗೈಡ್ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಕಂಬಳಿ ಮಾತನಾಡಿ, ದೇಶಕ್ಕಾಗಿ ರಾಷ್ಟ್ರ ನಾಯಕರ ಸಲ್ಲಿಸಿದ ತ್ಯಾಗ, ಬಲಿದಾನ ಸಂಕೇತವಾಗಿರುವ ಹುತ್ಮಾರ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತು, ನಾಯಕರಿಗೆ ಗೌರವಾರ್ಪಣಿ ಸಲ್ಲಿಸುವಂತ ಕಾರ್ಯ ನಿರಂತರವಾಗಿ ಆಗಬೇಕು. ದೇಶದ್ಯಾಂತ ಜ.30ರಂದು ಹುತ್ಮಾತರ ದಿನಾಚರಣೆಯನ್ನು ನಡೆಸುತ್ತಿದ್ದು, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇದನ್ನು ನಡೆಸುವಂತೆ ಆದೇಶವಿದೆ. ಈ ಮೂಲಕ ಮಕ್ಕಳು ಹುತಾತ್ಮ ನಾಯಕರನ್ನು ಸ್ಮರಿಸಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೂಲಿಬೆಲೆ ಕ್ಲಸ್ಟರ್ ಸಂಪನ್ಮೂಲಧಿಕಾರಿ ಮುತ್ತುರಾಜ್ ಮಾತನಾಡಿ, ಇಂಥ ಕಾರ್ಯಗಳು ಮಕ್ಕಳಲ್ಲಿ ಉತ್ತಮ ದೇಶ ಭಕ್ತಿ ಮತ್ತು ರಾಷ್ಟ್ರೀಯ ನಾಯಕರ ಬಗ್ಗೆ ಗೌರವ ಬರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಹುತಾತ್ಮರ ಜೀವನದ ಸರಳತೆ, ತ್ಯಾಗ, ಬಲಿದಾನ, ಚಳವಳಿ ಹಾಗೂ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿದ ಬಗ್ಗೆ ತಿಳಿಸಿಕೊಟ್ಟರು. ಮಕ್ಕಳಿಂದ ರಘುಪತಿ ರಾಘವ ರಾಜರಾಮ್ ಭಜನೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಮುದ್ದಪ್ಪ, ಸಹ ಶಿಕ್ಷಕಿ ಮಂಜುಳಾ, ಸುವರ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.