ಕ.ಪ್ರ.ವಾರ್ತೆ ಸೂಲಿಬೆಲೆ ಜೂ.6
ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅಸಮತೋಲನ ಹೋಗಲಾಡಿಸಲು ಪರಿಸರ ಸಂರಕ್ಷಣೆಯೊಂದಿಗೆ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವಂತ ಜವಾಬ್ದಾರಿ ಕಾರ್ಯಗತವಾಗಬೇಕು ಎಂದು ಸೂಲಿಬೆಲೆ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಪಿಎಸ್ಐ ಎಫ್.ಕೆ. ನದಾಫ್ ಹೇಳಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೂಲಿಬೆಲೆ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಟ್ಟು ಸುದ್ದಿಗಾರರೊಂದಿಗೆ ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆಲ್ಲ ಮಾನವ ಸಂತತಿ ಹೆಚ್ಚಳವಾಗಿ ತಾನು ಬದುಕಿ ಬಾಳಲು ವಸತಿಗಾಗಿ ಅರಣ್ಯ ಪ್ರದೇಶಗಳನ್ನು ಕಡಿದು ನಾಡನ್ನಾಗಿ ಮಾಡಿಕೊಂಡಿದ್ದು ಪರಿಣಾಮ ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಬರುತ್ತಿವೆ. ಬರೀ ಗಿಡ ಮರ ನಾಶದಿಂದ ಮಾತ್ರ ಪರಿಸರ ನಾಶವಾಗುತ್ತಿಲ್ಲ. ನಿತ್ಯ ಅಪಾರ ಪ್ರಮಾಣದಲ್ಲಿ ತಿನ್ನದೇ ವ್ಯಥ್ಯವಾಗಿ ಆಹಾರ ಪದಾರ್ಥಗಳನ್ನು ಬಿಸಾಡಲಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಕುಸಿತಕ್ಕೆ ಒಳಾಗುತ್ತಿರುವುದು ಸಹ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದರು. ಇದೇ ವೇಳೆ ಸಿಬ್ಬಂದಿ ಇದ್ದರು.
Advertisement