ಕಂಪ್ಯೂಟರ್ ತರಬೇತಿ ಪ್ರಶಸ್ತಿ ಪತ್ರ ವಿತರಣೆ

Updated on


ದೊಡ್ಡಬಳ್ಳಾಪುರ: ತಾಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಪಡೆದ ಪ್ರಶಸ್ತಿ ಪತ್ರಗಳ ವಿತರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ 2012-13ನೇ ಸಾಲಿನ ಅನುದಾನದಲ್ಲಿ ಉಚಿತ ಶಾಲಾ ಬ್ಯಾಗ್‌ಗಳ ವಿತರಣೆ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಸಕ್ತ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ  ನಡೆಯಿತು. ಅದೇ ರೀತಿ ಗಣರಾಜ್ಯೋತ್ಸವ ಮತ್ತು ಕನಕ ಜಯಂತ್ಯುತ್ಸವ ಸಹ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮೀಪತಿ, ಮಜರಾಹೊಸಹಳ್ಳಿ ಗ್ರಾ.ಪಂಚಾಯಿತಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಮುನಿಯಪ್ಪ, ಶಾಲಾ ಮುಖ್ಯಶಿಕ್ಷಕ ನರಸಿದೇವರು ಮತ್ತಿತರರು ಹಾಜರಿದ್ದರು.
ಗಲಭೆಯಲ್ಲಿ ನಷ್ಟ: ತಾತ್ಕಾಲಿಕ ಪರಿಹಾರ
ಹೊಸಕೋಟೆ: ತಾಲೂಕಿನ ಜಿನ್ನಾಗರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಅಂತರ್ಜಾತಿ ಪ್ರೇಮಿಗಳ ಗಲಭೆಯಲ್ಲಿ ನಷ್ಟಕ್ಕೊಳಗಾದ ಮನೆಗಳು, ವಾಹನಗಳು, ಜಾನುವಾರುಗಳು, ಗೃಹೋಪಯೋಗಿ ಸಾಮಗ್ರಿಗಳಿಗೆ ಹಾನಿಯುಂಟಾಗಿ ಈ ನಷ್ಟಕ್ಕೆ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಸಾಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಹಾರವಾಗಿ 85 ಸಾವಿರ ರು.ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ತಿರುವರಂಗ ನಾರಾಯಣಸ್ವಾಮಿ ಪರಿಹಾರದ ಚೆಕ್ಕುಗಳನ್ನು ನಷ್ಟಾನುಸಾರ ವಿತರಿಸಿದರು. ಮೋಟಪ್ಪ  ರು. 25 ಸಾವಿರ, ರಾಮಚಂದ್ರ ರು. 20 ಸಾವಿರ, ವೆಂಕಟರಮಣಪ್ಪ ರು. 10 ಸಾವಿರ, ನಾರಾಯಣಪ್ಪ ರು.10 ಸಾವಿರ, ವೆಂಕಟೇಶ್ ರು.10 ಸಾವಿರ, ವಿನುತಾ 10 ಸಾವಿರ ರು.ಗಳನ್ನು ಪರಿಹಾರವಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಿನ್ನಾಗರ ಜಗನ್ನಾಥ್, ಚಂದ್ರ, ಸಮಾಜಕಲ್ಯಾಣ ಅಧಿಕಾರಿ ಹೇಮಲತ ಮುಂತಾದವರು ಉಪಸ್ಥಿತರಿದ್ದರು.  
ಸಿ. ನಾರಾಯಣಸ್ವಾಮಿ ಅಧ್ಯಕ್ಷರಾಗಿ ನೇಮಕ
ಮಾಗಡಿ: ಆರ್.ಎಸ್.ಎಸ್. ಸಂಘ ಪರಿವಾರದ ಹಿರಿಯ ಕಾರ್ಯಕರ್ತ ತಿರುಮಲೆ ಸಿ. ನಾರಾಯಣಸ್ವಾಮಿ ಅವರನ್ನು ಸರ್ಕಾರ ಮೂರು ವರ್ಷಗಳ ಅವಧಿಗೆ ಮಾಗಡಿ ಪಟ್ಟಣದ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ  ಮಾಡಿ ನೇಮಕ ಮಾಡಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ಚಂದ್ರಪ್ಪ ಈ ಕುರಿತು ಆದೇಶದ ಪ್ರತಿಯನ್ನು ಟಿ.ಸಿ. ನಾರಾಯಣಸ್ವಾಮಿ ಅವರಿಗೆ ನೀಡಿದ್ದಾರೆ.  ರಾಜ್ಯಾ ಉಪಾಧ್ಯಕ್ಷ ನಿರ್ಮಲ  ಕುಮಾರ್ ಸುರಾನ,  ಕುಕ್ಕಟ ನಿಗಮದ ಅಧ್ಯಕ್ಷ ಬಿ.ನಾಗರಾಜು, ಆಶ್ರಯ ಸಮಿತಿ ನಾಮನಿರ್ದೇಶಕ  ಎಂ.ಟಿ.ಶಿವಣ್ಣ, ನಿಜಗುಣಶಿವಯೋಗಿ,  ವೆಂಕಟೇಶ್  ಅಯ್ಯಾಂಗಾರ್,  ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ, ಪಿ.ವಿ.ಶಾಂತರಾಜ್, ಪುಟ್ಟಸ್ವಾಮಿ, ಶಿವಾನಂದ್, ಆಂಜನೇಶಗುಪ್ತಾ,
ವೆಂಕಟೇಶ್  ಬಾಬು, ಮಹೇಶ್, ಗೋಪಾಲ್, ಕೆ.ಎಸ್. ಹರೀಶ್,  ದೇವಾಂಗ ಸಮಾಜದ ಮಾಜಿ ಅಧ್ಯಕ್ಷ ಟಿ.ಸಿ.ರಮೇಶ್, ಕೆ.ಎಸ್. ಪ್ರಕಾಶ್, ಮೂರ್ತಿ, ಪದ್ಮನಾಭ್, ಜಗದೀಶ್ ಸೇರಿದಂತೆ ಪಕ್ಷದ ಮುಖಂಡರು, ಅನೇಕ ಅಭಿಮಾನಿಗಳ ಬಳಗ ಟಿ.ಸಿ. ನಾರಾಯಣಸ್ವಾಮಿ ಅವರಿಗೆ ಹಾರ ಹಾಕಿ ಅಭಿನಂದನೆ  ಸಲ್ಲಿಸಿದರು.
ಸೋಮಶೇಖರ್ ಅಧ್ಯಕ್ಷರಾಗಿ ಆಯ್ಕೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಸಿ.ಜಿ. ನಾಗೇಶ್ ಅವರು ಶಾಸಕ ವೆಂಕಟಸ್ವಾಮಿ ಅವರ ಆದೇಶದ ಮೇರೆಗೆ ದೇವನಹಳ್ಳಿ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್. ಸೋಮಶೇಖರ್ ಅವರನ್ನು ದೇವನಹಳ್ಳಿ ಬ್ಲಾಕ್ ಕಾರ್ಮಿಕ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಈ ವಿಷವನ್ನು ಜಿಲ್ಲಾಧ್ಯಕ್ಷ ಸಿ.ಜಿ. ನಾಗೇಶ ತಿಳಿಸಿ ಆದೇಶ ಪತ್ರಗಳನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿತರಣೆ ಮಾಡಿದರು.    ವಿಜಯಪುರ ಬ್ಲಾಕ್ ಕಾರ್ಮಿಕ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಚನ್ನರಾಯಪಟ್ಟಣ ಹೋಬಳಿ ಭಟ್ರ ಮಾರೇನಹಳ್ಳಿಯ ಆರ್.ಮಂಜುನಾಥ್ ಅವರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com