ನೇತ್ರ ಚಿಕಿತ್ಸಾ ಶಿಬಿರ

Updated on: 

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 198ನೇ ಉಚಿತ ಕಣ್ಣಿನ ಪರೀಕ್ಷೆ ಮತ್ತು ತಪಾಸಣೆ, ಐಓಎಲ್ ಅಳವಡಿಕೆ ಶಿಬಿರ ಲಯನ್ಸ್ ಭವನದಲ್ಲಿ ಸೋಮವಾರ ನಡೆಯಿತು.
ಪಿಳ್ಳಮ್ಮ-ಚಿಕ್ಕಓಬಣ್ಣ, ಸುಮಂಗಲಮ್ಮ-ನಾರಾಯಣಮೂರ್ತಿ ಸ್ಮರಣಾರ್ಥ ಎಲ್ಲಿಮನೆ ಕುಟುಂಬ ಪ್ರಾಯೋಜಿಸಿದ್ದ ಶಿಬಿರವನ್ನು ಗಿರಿಜಾ ಆವಲಮೂರ್ತಿ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ಡಾ.ಎ.ಓ.ಆವಲಮೂರ್ತಿ ಮಾತನಾಡಿ, ಲಯನ್ಸ್ ಕ್ಲಬ್ ಕಣ್ಣಿನ ಶಿಬಿರಗಳ ಮೂಲಕ ಸಾವಿರಾರು ಜನ ಇಂದು ಜಗತ್ತನ್ನು ನೋಡುತ್ತಿದ್ದಾರೆ. 198 ತಿಂಗಳುಗಳ ಕಾಲ ಸತತವಾಗಿ ನಡೆದುಕೊಂಡು ಬಂದಿರುವ ಶಿಬಿರದ ಯಶಸ್ಸು ಹಾಗೂ ಕಣ್ಣಿನ ಚಿಕಿತ್ಸಾ ವಿಚಾರದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್‌ನ ಸಾಧನೆ ಗಣನೀಯ. ಈ ಬಗೆಯ ಶಿಬಿರಗಳಿಂದ ಜನರಿಗೆ ಮಹತ್ವದ ಉಪಯೋಗ ಸಾಧ್ಯವಿದೆ. ಲಯನ್ಸ್ ಸಾಮಾಜಿಕ ಸೇವೆಯಲ್ಲಿ ಗಣನೀಯ ಹೆಸರು. ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವಾ ಕಾರ್ಯಗಳನ್ನು ವಿಸ್ತರಿಸಿಕೊಂಡು ಬಂದಿದೆ ಎಂದರು.
ಶಿಬಿರದಲ್ಲಿ ಒಟ್ಟು 60ಕ್ಕೂ ಹೆಚ್ಚು ರೋಗಿಗಳಿಗೆ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ ಐಓಎಲ್ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಪಿ.ಸಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಳ್ಳಾಪುರ ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್‌ಡಿ, ಉಪ ಆರಕ್ಷಕ ನಿರೀಕ್ಷಕ ಜಗದೀಶ್, ಲಯನ್ಸ್ ಕಾರ್ಯದರ್ಶಿ ಚೂಡಿನಾಥ್, ಖಜಾಂಚಿ ಎಸ್.ನಟರಾಜ್, ಚಾರಿಟೀಸ್ ಟ್ರಸ್ಟ್‌ನ ಕೆ.ಎಂ. ಹನುಮಂತರಾಯಪ್ಪ, ಕಣ್ಣಿನ ಸೇವಾ ಕೇಂದ್ರದ ಅಧ್ಯಕ್ಷ ಪಿ.ಸಿ. ಪುಟ್ಟರುದ್ರಪ್ಪ ಮತ್ತಿತರರು ಭಾಗವಹಿಸಿದ್ದರು. ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ, ಅಕ್ಷಿಜೋಡಣಾ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಲಯನೆಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com