ಹೊಸಕೋಟೆ: ಕಾನೂನಿನ ಬಗ್ಗೆ ಎಲ್ಲರೂ ಸಾಮಾನ್ಯ ಜ್ಞಾನ ಹೊಂದಬೇಕಾದ್ದು ಅತ್ಯವಶ್ಯವಾಗಿದ್ದ ಅಜ್ಞಾನ ಕ್ಷಮಾರ್ಹವಲ್ಲ ಎಂದು ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗೋಮತಿ ಶೇಟ್ ಹೇಳಿದರು.ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಕಾನೂನು ಸಹಾಯಕರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಹರೀಂದ್ರ ಮಾತನಾಡಿ ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ 100 ಸ್ವಯಂಸೇಸಕರನ್ನು ನೇಮಿಸುವ ಗುರಿ ಹೊಂದಿದ್ದು ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಸಹ ವಿತರಿಸಲಾಗುವುದು ಎಂದರು. ತಹಸೀಲ್ದಾರ್ ಕೊಟ್ರೇಶ್ ಮಾತನಾಡಿ ಕಂದಾಯ ಇಲಾಖೆಯಲ್ಲಿ ಸಕಾಲ ವ್ಯವಸ್ಥೆಯಡಿ 46 ಸೇವೆಗಳನ್ನು ನಿರ್ದಿಷ್ಟ ಅವದಿ ಯೊಳಗೆ ಪಡೆದುಕೊಳ್ಳಬಹುದಾಗಿದೆ ಎಂದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅನಿತಾ, ಎಪಿಪಿ ವೆಂಕಟಗಿರಿ, ಹೃಷಿಕೇಶ್, ವಕೀಲರು ಉಪಸ್ಥಿತರಿದ್ದರು.