ಮಾಗಡಿ: ಪಿಡಿಒ ಮತ್ತು ಎಇಇ ಅವರನ್ನು ಸರ್ಕಾರ ಅಮಾನುಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ಪಿಡಿಓಗಳ ನಿಯೋಗ ಶಾಸಕರನ್ನು ಭೇಟಿ ಅವರ ಅಮಾನತನ್ನು ರದ್ದುಪಡಿಸುವಂತೆ ಆಗ್ರಹಿಸಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಲ್ಲಿ ಮನವಿ ಸಲ್ಲಿಸಿದರು.
ಇದೇ ವೇಳೆ ಹುಲೀಕಲ್ ಪಿಡಿಒ ವೆಂಕಟೇಶ್ ಮಾತನಾಡಿ ಖಾಸಗಿ ಜಮೀನಿನಲ್ಲಿ ಕೊರೆದಿರುವ ಕೊಳವೆ ಬಾವಿ ಕೊರೆದಿರುವುದು, ಅದು ನಿರುಪಯುಕ್ತ ಎಂದು ಪಿಡಿಒ ಗಮನಕ್ಕೆ ಬಂದಿರುವುದಿಲ್ಲ. ಹೇಗೆ ಪಿಡಿಒಗಳು ನಿರುಪಯುಕ್ತ ಕೊಳವೆ ಬಾವಿ ಎಂದು ತಿಳಿದು ಮುಚ್ಚಿಸಲು ಸಾಧ್ಯ. ಕೇವಲ ಪಿಡಿಒ ಮತ್ತು ಎಇಇ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನುತುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಕೂಡಲೆ ಅವರ ಅಮಾನತನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸುವಂತೆ ಮನವಿ ಮಾಡಿ ದರು. ಮನವಿ ಸ್ವೀಕರಿಸಿದ ಶಾಸಕ ಎಚ್.ಸಿ. ಬಾಲಕೃಷ್ಣ, ಪಿಡಿಒ ಮತ್ತು ಎಇಇ ಅವರ ಅಮಾನುತು ಸಂಬಂಧ ಸಚಿವರಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸುವಂತೆ ಕೋರುವುದಾಗಿ ಪಿಡಿಒಗಳ ಮನವೊಲಿಸಿದರು.
ತಾ.ಪಂ. ಅಧ್ಯಕ್ಷೆ ಅನುಸೂಯಮ್ಮ ಮರಿಗೌಡ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜು, ತಹಸೀಲ್ದಾರ್ ಶಿವಕುಮಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ. ರಂಗೇಗೌಡ ಇದ್ದರು.
Advertisement